ಶಿರಸಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರದ ಬಿ ಫಾರಂಗಳನ್ನು ಮಾರಿಕಾಂಬಾ ದೇವಾಲಯದಲ್ಲಿ ಪೂಜೆ ಮಾಡಿಸಿದ ಘಟನೆ ಬುಧವಾರ ನಡೆಯಿತು.
ಬುಧವಾರ ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಜೆಡಿಎಸ್ ರ‍್ಯಾಲಿಗೆ ಚಾಲನೆ ಕೊಡುವ ಮೊದಲು ದೇವಿ ದರ್ಶನ ಪಡೆದು ಬಿ ಫಾರಂ ಪೂಜೆ ಸಲ್ಲಿಸಿದರು.
ಬಳಿಕ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಜೆಡಿಎಸ್ ಕಾರ್ಯಕರ್ತರು 50 ಅಡಿಗೂ ಎತ್ತರದ ಅನಾನಸ್ ಹಾರವನ್ನು ಕ್ರೇನ್ ಮೂಲಕ ಮಾಜಿ ಸಿಎಂಗೆ ಹಾಕಿಸಿದರು.
ಇದಕ್ಕೂ ಮೊದಲು ಹೆಲಿಪ್ಯಾಡ್ ನಲ್ಲಿ ಬಂದಿಳಿದ ಕುಮಾರಸ್ವಾಮಿ ಅವರ ನೋಡಲು ಬಂದ ಪ್ರಮುಖರ ಜೇಬಿಗೆ ಚೋರನೋರ್ವ ಕತ್ತರಿ ಹಾಕಿ ಪೊಲೀಸರ ಅತಿಥಿಯಾದ ಘಟನೆ ಕೂಡ ನಡೆಯಿತು.