Breaking News

ದೇವೇಗೌಡ ಕುಟುಂಬ ಮುಗಿಸಲು ಶಕುನಿಗಳು ಕಾಯುತ್ತಿದ್ದಾರೆ: H.D.K.

Spread the love

ಹುಬ್ಬಳ್ಳಿ : ದೇವೇಗೌಡ ಕುಟುಂಬ ಮುಗಿಸಲು ಶಕುನಿಗಳು ಇರ್ತಾರೆ‌. ಯಾರ ತಲೆ ಕೆಡಿಸ್ತಾರೆ ಅನ್ನೋ ಮಾಹಿತಿ ಇಲ್ವಾ ಎಂದು ಮಾಜಿ ಸಿಎಂ ಕುಮಾರಸ್ಚಾಮಿ ಹೇಳಿದರು.

ನಗರದಲ್ಲಿ ವಿವಿಧ ದೇವಳಗಳಿಗೆ ಭೇಟಿ ನೀಡಿ ಮಾತನಾಡಿದ ಅವರು ನಾನು‌ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ.

ನನಗೂ ಶಕುನಿಗಳು ಯಾರ ಅನ್ನೋ ಮಾಹಿತಿ ಬರುತ್ತದೆ. ರಾಜಕಾರಣದಲ್ಲಿ ಅವತ್ತಿನ ಕುರುಕ್ಷೇತ್ರ ನಡೀತಿದೆ. ದೇವೆಗೌಡರ ಕುಟುಂಬಕ್ಕೆ ಹಿತೈಷಿಗಳು ಎಂದು ನಾಟಕ ಮಾಡಿದವರಿಗೆ ಹಾಲೆರೆದರೆ ಏನು ಮಾಡಲಿ ಎಂದರು.

ಭವಾನಿ ಸ್ಪರ್ಧೆ ‌ಮಾಡಿದ್ರೆ ಗೆಲ್ಲಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಕಾರಣಕ್ಕೂ ಸಾಧ್ಯ ಇಲ್ಲ.
ನಾಳೆ ನಾನು ಯಾಕೆ ಆಹಾರ ಆಗಲಿ. ನಾಳೆ ನೀವೇ ಬರೀತಿರಿ ಕಾರ್ಯಕರ್ತ ಇದ್ರು, ಕುಟುಂಬಕ್ಕೆ ಇನ್ನೊಂದು ಅಂತ ಬರೀತಿರಿ. ನಿಮಗೆ ಯಾಕೆ ಆಹಾರ ಕೊಡಬೇಕು ಎಂದರು‌.

ನಮ್ಮಗೆ ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು. ಟಿಕೆಟ್ ಘೋಷಣೆ ಆದ ಮೇಲೆ ನಮ್ಮ ಪಕ್ಷಕ್ಕೆ ಬರಬಹುದು. ಬಿಜೆಪಿಯಲ್ಲಿ ನೂರಾರು ಹಾಸನ ಇದೆ. ನಮ್ಮಲ್ಲಿ ‌ಒಂದು ಸಿಂಹಾಸನಕ್ಕೆ ಗೊಂದಲವಿದೆ ಎಂದರು. ಚುನಾವಣೆ ಪ್ರಚಾರಕ್ಕೆ ನಾವೆಲ್ಲ ಬಂದಿದ್ದೇವೆ. ನಾನು ನಿರಂತರವಾಗಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದೇನೆ ಎಂದರು.

ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಮಯದ ಅಭಾವ, ಸಣ್ಣಪುಟ್ಡ ಸಮಸ್ಯೆ ಬಗೆಹರಿಸಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಪ್ರತಿಯೊಂದು ನಾನು ತೀರ್ಮಾನ ಮಾಡಬೇಕಿದೆ‌. ಪ್ರಾಥಮಿಕ ಹಂತದ ಮಾಹಿತಿ ಇದೆ, ನಂತರ ಎಲ್ಲ ತೀರ್ಮಾನ ಮಾಡುತ್ತೇವೆ . ಏ.14 ರಂದು ಪಕ್ಷಕ್ಕೆ ಬಹಳ ಜನ ಸೇರ್ತಾರೆ ಎಂದರು.

ಹಾಸನ ಟಿಕೆಟ್ ದಂಗಲ್ ವಿಚಾರ ಪ್ರತಿಕ್ರಿಯಿಸಿ, ಕೆಲವು ಟಿವಿಗಳಲ್ಲಿ ಅವರು ಇವರು ಮಾತಾಡಿದ್ರು ಅಂತ ಬರುತ್ತೆ. ನಾನು ಯಾರನ್ನು ಕೆಣಕಿಲ್ಲ. ನನ್ನ ನಿಲುವು ಸ್ಪಷ್ಟವಿದೆ. ಕಾರ್ಯಕರ್ತರ ಮೂಲಕ ಗೆಲ್ಲಬೇಕು, ಕುಟುಂಬದ ಮೂಲಕ ಅಲ್ಲ. ಸ್ಪಷ್ಟ ಬಹುಮತದ ಸರ್ಕಾರ ತರೋಕೆ ನನ್ನ ಪ್ರಯತ್ನ ಮಾಡುತ್ತೇನೆ ಎಂದರು.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ