Breaking News

ಪಂದ್ಯದ ಗತಿಯನ್ನೇ ಬದಲಾಯಿಸಿದ ಸೂಪರ್‌ ಹ್ಯೂಮನ್‌ ಮಯಾಂಕ್‌

Spread the love

ಅಬುಧಾಬಿ: ಕ್ರಿಕೆಟ್‌ ಇತಿಹಾಸದಲ್ಲಿ ಎರಡು ಸೂಪರ್‌ ಓವರ್‌ ಕಂಡು ದಾಖಲೆ ಬರೆದ ಪಂದ್ಯದಲ್ಲಿ ಕನ್ನಡಿಗ ಮಯಾಂಕ್‌ ಅಗರ್‌ವಲ್‌ ಅವರ ಅತ್ಯುತ್ತಮ ಫೀಲ್ಡಿಂಗ್‌ ಕ್ರಿಕೆಟ್‌ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಮೊದಲ ಸೂಪರ್‌ ಓವರ್‌ನಲ್ಲಿ ಬ್ಯಾಟ್‌ ಮತ್ತು ಬೌಲ್‌ ಮಾಡಿದವರು ಎರಡನೇ ಸೂಪರ್‌ ಓವರ್‌ನಲ್ಲಿ ಬ್ಯಾಟ್‌, ಬೌಲ್‌ ಮಾಡುವಂತಿಲ್ಲ ಎಂಬ ನಿಯಮದ ಹಿನ್ನೆಲೆಯಲ್ಲಿ ಪಂಜಾಬ್ ಪರ ಕ್ರಿಸ್ ಜೋರ್ಡಾನ್ ಅವರು ಎರಡನೇ ಸೂಪರ್ ಓವರ್ ಬೌಲ್ ಮಾಡಿದರು.ಮೊದಲ ಬಾಲ್‌ ವೈಡ್‌ ಆದರೆ ನಂತರದ ಬಾಲಿನಲ್ಲಿ ಒಂದು ಸಿಂಗಲ್ ಬಂತು. ಎರಡನೇ ಬಾಲಿನಲ್ಲಿ ಒಂದು ರನ್ ಬಂತು. ಮೂರನೇ ಎಸೆತವನ್ನು ಕೀರನ್ ಪೊಲಾರ್ಡ್ ಬೌಂಡರಿಗಟ್ಟಿದರು. ನಾಲ್ಕನೇ ಎಸೆತ ಮತ್ತೆ ವೈಡ್ ಆಯ್ತು. ನಾಲ್ಕನೇ ಬಾಲ್ ಸಿಂಗಲ್ ಬಂದು ಹಾರ್ದಿಕ್ ಪಾಂಡ್ಯ ಔಟ್ ಆದರು. ಐದನೇ ಬಾಲ್ ಡಾಟ್ ಬಾಲ್ ಆಯ್

ಸ್ಟ್ರೈಕ್‌ನಲ್ಲಿದ್ದ ಕೊನೆಯ ಎಸೆತವನ್ನು ಕೀರನ್‌ ಪೋಲಾರ್ಡ್‌ ಸಿಕ್ಸರ್‌ ಅಟ್ಟಲು ಬಲವಾಗಿ ಹೊಡೆದರು. ಚೆಂಡು ಸಿಕ್ಸ್‌ಗೆ ಹೋಗುತ್ತದೆ ಎನ್ನುವಷ್ಟರಲ್ಲಿ ಬೌಂಡರಿ ಗೆರೆ ಬಳಿ ಇದ್ದ ಮಯಾಂಕ್‌ ಜಿಗಿದು ಬಾಲನ್ನು ತಡೆದು ಎಸೆದರು. 4ರನ್‌ ತಡೆದ ಪರಿಣಾಮ ಮುಂಬೈ 11 ರನ್‌ ಗಳಿಸಿತು.

ಒಂದು ವೇಳೆ ನೇರವಾಗಿ ಸಿಕ್ಸ್‌ ಹೋಗುತ್ತಿದ್ದರೆ ಅಥವಾ ತಡೆಯುವ ಪ್ರಯತ್ನದಲ್ಲಿ ಕೈಗೆ ಸಿಕ್ಕಿ ಬಾಲ್‌ ಬೌಂಡರಿ ಗೆರೆ ದಾಟುತ್ತಿದ್ದರೆ ಕ್ರಿಸ್‌ ಗೇಲ್‌ ಮತ್ತು ಮಯಾಂಕ್‌ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇತ್ತು. ಆದರೆ ಮಯಾಂಕ್‌ ಅವರ ಅತ್ಯುತ್ತಮ ಫೀಲ್ಡಿಂಗ್‌ ಪಂದ್ಯವನ್ನೇ ಬದಲಾಯಿಸಿ ಬಿಟ್ಟಿತು. 4 ರನ್‌ ಸೇವ್‌ ಮಾಡಿ ಕೇವಲ 2 ರನ್‌ ನೀಡಿದ ಮಯಾಂಕ್‌ ಅವರ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


Spread the love

About Laxminews 24x7

Check Also

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ”

Spread the love    ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಇದೇ ಮೊದಲ ಬಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ