Breaking News

ಮಯೂರಿ ಖ್ಯಾತ್ರಿ ನಟನೆಯ ಆದ್ಯಂತ ಚಿತ್ರ ಬಿಡುಗಡೆಯ ಬಾಗಿಲಿಗೆ ಬಂದು ನಿಂತಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕ ಮೆಚ್ಚುಗೆ

Spread the love

ನವ ನಟ ದಿಲೀಪ್, ಮಯೂರಿ ಖ್ಯಾತ್ರಿ ನಟನೆಯ ಆದ್ಯಂತ ಚಿತ್ರ ಬಿಡುಗಡೆಯ ಬಾಗಿಲಿಗೆ ಬಂದು ನಿಂತಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದ ಆದ್ಯಂತ ಚಿತ್ರ ಒಂದು ಮಿಲಿಯನ್ ವೀಕ್ಷಣೆ ಪಡೆದುಕೊಂಡು ಭರವಸೆ ಮೂಡಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬಿಡುಗಡೆ ಹೊಸ್ತಿಲಲ್ಲಿರೋ ಚಿತ್ರತಂಡ ಕುತೂಹಲಕಾರಿ ಟೀಸರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಇದೇ ತಿಂಗಳು ಟೀಸರ್ ಪ್ರೇಕ್ಷಕರ ಮುಂದೆ ಬರಲಿದೆ.

ಪುನೀತ್ ಶರ್ಮಾ ಚಿತ್ರದ ಸೂತ್ರದಾರ. ಹಲವು ಸಿನಿಮಾಗಳಲ್ಲಿ ದುಡಿದ ಅನುಭವವನ್ನು ತಮ್ಮ ಮೊದಲ ಚಿತ್ರದ ಮೂಲಕ ಹೊರತರಲು ಸಿದ್ಧವಾಗಿರೋ ಪುನೀತ್ ಶರ್ಮಾ ಕಥೆ ಬರೆದು ತಾವೇ ನಿರ್ದೇಶನ ಮಾಡಿದ್ದಾರೆ. ಆದ್ಯಂತ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವಾಗಿದ್ದು, ಹಲವು ಟ್ವಿಸ್ಟ್ ಟರ್ನ್ ಗಳು ಚಿತ್ರದಲ್ಲಿದ್ದು ಸಿನಿರಸಿಕರಿಗೆ ಫುಲ್ ಮನೋರಂಜನೆ ನೀಡೋದರ ಜೊತೆ ರೋಚಕ ಅನುಭವ ನೀಡೋದು ಪಕ್ಕಾ ಅಂತಿದೆ ಚಿತ್ರತಂಡ. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

ಲೇಖನಾ ಕ್ರಿಯೇಷನ್ಸ್ ಹಾಗೂ ಆರ್.ಆರ್ ಮೂವೀಸ್ ಬ್ಯಾನರ್ ನಡಿ ರಮೇಶ್ ಬಾಬು ಆದ್ಯಂತ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬೆಂಗಳೂರು, ಸಕಲೇಶಪುರ ಮತ್ತು ಕಳಸಾ ಸುತ್ತಾಮುತ್ತ ಸುಂದರ ಲೊಕೇಷನ್ ಗಳಲ್ಲಿ ಚಿತ್ರವನ್ನು ಸೆರೆಹಿಡಿಯಲಾಗಿದ್ದು, ನವೀನ್ ಕುಮಾರ್ ಚೆಲ್ಲಾ ಸಿನಿಮಾಟೋಗ್ರಫಿ, ಕಿಲ್ಲಿಂಗ್ ವೀರಪ್ಪನ್ ಖ್ಯಾತಿಯ ಸಂಗೀತ ನಿರ್ದೇಶಕ ಸ್ಯಾಂಡಿ ಅಡ್ಹಂಕೀ ಮ್ಯೂಸಿಕ್ ಮ್ಯಾಜಿಕ್ ಆದ್ಯಂತ ಚಿತ್ರಕ್ಕಿದೆ. ರಮೇಶ್ ಭಟ್, ಶ್ರೀನಿವಾಸ್, ವಸಿಷ್ಠ, ಪ್ರಶಾಂತ್ ನಟನಾ, ನಿಖಿಲ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಸಾಕಷ್ಟು ಕುತೂಹಲ ಕ್ರಿಯೇಟ್ ಮಾಡಿರೋ ಈ ಚಿತ್ರದ ಟೀಸರ್ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.


Spread the love

About Laxminews 24x7

Check Also

ನ. 22ಕ್ಕೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ ಮರು ಬಿಡುಗಡೆ

Spread the love ಹುಬ್ಬಳ್ಳಿ: ‘ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಿದ್ಧಪಡಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನಚಿತ್ರ ನವೆಂಬರ್‌ 22ರಂದು ರಾಜ್ಯದಾದ್ಯಂತ ಮರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ