ಬೆಳಗಾವಿ: ಲಕ್ಷ್ಮಣ ಸವದಿ ಯಾಕೆ ಹತಾಶರಾಗಿದ್ದಾರೋ ತಿಳಿಯುತ್ತಿಲ್ಲ. ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ, ಲಕ್ಷ್ಮಣಣ್ಣ ನೀನು ಶಾಂತವಾಗಿರು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.
- ಮಹಾರಾಷ್ಟ್ರದ ಗಡಿ ಶಿನ್ನೋಳಿಯಲ್ಲಿ ರಮೇಶ ಜಾರಕಿಹೊಳಿ ಸಭೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು. ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಹೇಶ ಕುಮಟಳ್ಳಿ ಮಧ್ಯೆ ಫೈಟ್ ವಿಚಾರದ ಕುರಿತು ಪ್ರಶ್ನಿಸಿದಾಗ, ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಲು ಬರುವುದಿಲ್ಲ. ನನಗೆ ನೂರಕ್ಕೆ ನೂರರಷ್ಟು ವಿಶ್ವಾಸ ಇದೆ, ಮಹೇಶ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ಸಿಗಲಿದೆ. ಮಹೇಶ್ ಜೊತೆಗೆ ಶ್ರೀಮಂತ ಪಾಟೀಲ ಸೇರಿ ಬಿಜೆಪಿ ಸೇರಿದ ಎಲ್ಲರಿಗೂ ಬಿಜೆಪಿ ಟಿಕೆಟ್ ಸಿಗಲಿದೆ. ಈ ಹಿಂದೆ ಬಿಜೆಪಿ ಸೇರಿದ 17 ಶಾಸಕರಿಗೂ ಬಿಜೆಪಿ ಹೈಕಮಾಂಡ್ ಆಶೀರ್ವಾದ ನೀಡಲಿದೆ ಎಂದರು.
- ಮಹೇಶ ಕುಮಟಳ್ಳಿ ಬದಲು ಬಿಜೆಪಿ ಟಿಕೆಟ್ ನನಗೆ ಕೊಡಬೇಕು ಎಂಬ ಸವದಿ ಪಟ್ಟು. ಮಹೇಶ ಕುಮಟಳ್ಳಿ ಸೋತರೆ ಅದರ ಹಣೆಪಟ್ಟಿ ನನಗೆ ಕಟ್ಟಲು ಷಡ್ಯಂತ್ರ ನಡೆದಿದೆ ಎಂಬ ಸವದಿ ಹೇಳಿಕೆ ವಿಚಾರ ಕುರಿತು ಪ್ರಶ್ನಿಸಿದಾಗ, ಸೋಲು, ಗೆಲುವು ದೇವರ ಇಚ್ಛೆ, ಲಕ್ಷ್ಮಣ ಸವದಿ ಹತಾಶೆ ಆಗ್ತಿರೋದೆಕೆ ಗೊತ್ತಾಗುತ್ತಿಲ್ಲ, ನಮಗೆ ವರಿಷ್ಠರಿದ್ದಾರೆ, ಅವರ ಮುಂದೆ ನಾನು, ಲಕ್ಷ್ಮಣ ಸವದಿ ಗಿಡದ ತಪ್ಪಲು. ಹೈಕಮಾಂಡ್ ಹೆಮ್ಮರ. ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಇದೇ ವೇಳೆ ಮೀಡಿಯಾಗಳ ವಿರುದ್ಧವೂ ಫುಲ್ ಗರಂ ಆದರು. ದುಡ್ಡು ತೆಗೆದುಕೊಂಡು ಬಂದು ನೀವು ನಮಗೆ ಡಿಸ್ಟರ್ಬ್ ಮಾಡ್ತಾ ಇದ್ದೀರಿ. ನೀವು ಇಲ್ಲಿ ಬಂದಿದ್ದೇ ರಾಂಗ್ ಎಂದು ಆಕ್ರೋಶ ವ್ಯಕ್ತಪಡಿಸಿದರು. - ಇಲ್ಲಿ ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧಿಸಿದ ಸಭೆ ಮಾಡುತ್ತಿಲ್ಲ. ಗ್ರಾಮೀಣ ಕ್ಷೇತ್ರದ ಆಕಾಂಕ್ಷಿ ನಾಗೇಶ ಮುನ್ನೋಳಕರ್ ಅವರ ಸಂಬಂಧಿಕರ ಫ್ಯಾಕ್ಟರಿ ಉದ್ಘಾಟನೆ ಇದೆ. ಅದಕ್ಕೆ ನಾವೆಲ್ಲ ಬಂದು ಊಟಕ್ಕೆ ಸೇರಿದ್ದೇವೆ. ಇಲ್ಲಿ ನೀವು ಬಂದಿದ್ದೇ ತಪ್ಪು ಎಂದು ಹೇಳಿದರು.