Breaking News

ಸುದೀಪ್ ಬೆನ್ನಲ್ಲೇ ಚುನಾವಣಾ ಪ್ರಚಾರಕ್ಕೆ ನಟ ಯಶ್ ಎಂಟ್ರಿ :ಚುನಾವಣಾ ಪ್ರಚಾರಕ್ಕೆ ಕರೆತರಲು ರಾಜಕೀಯ ಮುಖಂಡರು ಸಂಪರ್ಕ ಮಾಡಿದ್ದಾರೆ

Spread the love

ಬೆಂಗಳೂರು : ಬಿಜೆಪಿ ಪರ ಪ್ರಚಾರ ಮಾಡುವುದಾಗಿ ನಟ ಸುದೀಪ್ ಘೋಷಣೆ ಮಾಡಿದ ಬೆನ್ನಲ್ಲೇ ನಟ ರಾಕಿಂಗ್ ಸ್ಟಾರ್ ಯಶ್ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆತರಲು ರಾಜಕೀಯ ಮುಖಂಡರು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ.

ಹೌದು, ಸ್ಟಾರ್ ಪ್ರಚಾರಕರನ್ನು ಕರೆತಂದು ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿರುವ ರಾಜಕೀಯ ಪಕ್ಷಗಳು ನಟ ಯಶ್ ಮನೆಯ ಬಾಗಿಲು ಕೂಡ ತಟ್ಟಿದ್ದಾರೆ ಎನ್ನಲಾಗಿದೆ.

ಆದರೆ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿರುವ ನಟ ಯಶ್ ಇದಕ್ಕೆ ನೋ ಎಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ಯಾವ ಪಕ್ಷದ ಪರ ಕೂಡ ಕೆಲಸ ಮಾಡಲ್ಲ, ನಾನು ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಕೆಜಿಎಫ್ ಸಿನಿಮಾದ ಬಳಿಕ ನಟ ಯಶ್ ಖ್ಯಾತಿ ಇನ್ನಷ್ಟು ಎತ್ತರಕ್ಕೆ ಬೆಳೆದಿದ್ದು, ಈಗಾಗಲೇ ಹಲವು ರಾಜಕೀಯ ನಾಯಕರು ಯಶ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಯಶ್ ಅವರ ಜನಪ್ರಿಯತೆಯನ್ನು ಬಳಸಿಕೊಂಡು ವೋಟು ಗಿಟ್ಟಿಸಿಕೊಳ್ಳುವ ತಂತ್ರ ನಡೆದಿದೆ . ಆದರೆ ಯಶ್ ಯಾರ ಪರ ಕೂಡವೂ ಪ್ರಚಾರ ಮಾಡುತ್ತಿಲ್ಲ ಎಂದು ಹೇಳಿದ್ದಾರೆ ಎಂದು ಮೂಲಗಳು ಹೇಳಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ನಟ ಯಶ್ ಸುಮಲತಾ ಪರ ಪ್ರಚಾರ ನಡೆಸಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಸುಮಲತಾ ಗೆಲ್ಲೋಕೆ ಇದು ಕೂಡ ಪ್ಲಸ್ ಪಾಯಿಂಟ್ ಆಗಿತ್ತು.

ಬಿಜೆಪಿ ಪರ ನಟ ‘ಸುದೀಪ್’ ಪ್ರಚಾರಕ್ಕೆ ಮಹೂರ್ತ ಫಿಕ್ಸ್ : ಏ.14 ರಿಂದ ಮತಯಾಚನೆ ಆರಂಭ

ಬೆಂಗಳೂರು : ಬಿಜೆಪಿ ಪರ ನಟ ಕಿಚ್ಚ ಸುದೀಪ್ ಪ್ರಚಾರಕ್ಕೆ ಮಹೂರ್ತ ನಿಗದಿಯಾಗಿದ್ದು, ಏ.14 ರಿಂದ ಪ್ರಚಾರ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.ಸಿಎಂ ಬೊಮ್ಮಾಯಿ ಹಾಗೂ ಕೆಲ ನಾಯಕರ ಪರ ನಟ ಸುದೀಪ್ ಪ್ರಚಾರ ನಡೆಸಲಿದ್ದು, ಯಾವ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಇತ್ತೀಚೆಗಷ್ಟೇ ನಟ ಸುದೀಪ್ ‘ಸಿಎಂ ಬೊಮ್ಮಾಯಿ’ಗೆ ಬೆಂಬಲ ನೀಡುವುದಾಗಿ ನಟ ಕಿಚ್ಚ ಸುದೀಪ್ ಘೋಷಣೆ ಮಾಡಿದ್ದರು. ‘ಬೊಮ್ಮಾಯಿ ಅವರನ್ನು ಚಿಕ್ಕಂದಿನಿಂದಲೂ ನೋಡಿದ್ದೇನೆ, ಚಿತ್ರರಂಗದ ಕಷ್ಟದ ದಿನಗಳಲ್ಲಿ ಹಲವರು ಬೆಂಬಲ ನೀಡಿದ್ದರು. ಅದರಲ್ಲಿ ಸಿಎಂ ಬೊಮ್ಮಾಯಿಯುವರು ಬಹಳ ಸಪೋರ್ಟ್ ಮಾಡಿದ್ದಾರೆ. ಹಾಗಾಗಿ ಆ ವ್ಯಕ್ತಿಗೆ ಬೆಂಬಲ ನೀಡುತ್ತೇನೆ, ನಾನು ನನ್ನ ಅಂಕಲ್ ಗೆ ಸಪೋರ್ಟ್ ಮಾಡುತ್ತೇನೆ, ಈ ವ್ಯಕ್ತಿ ನನಗೆ ಬಹಳ ಬೇಕಾಗಿರುವುದರಿಂದ ನಾನು ಈ ವ್ಯಕ್ತಿಗೆ ಬೆಂಬಲ ನೀಡುತ್ತೇನೆ ಎಂದು ನಟ ಕಿಚ್ಚ 


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ