ಮದ್ಯದ ಅಮಲಿನಲ್ಲಿ ಸಮವಸ್ತ್ರದಲ್ಲೇ ದೇವಸ್ಥಾನದ ಮುಂದೆ ಕುಣಿದು ಕುಪ್ಪಳಿಸಿದ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಅನ್ನು ಅಮಾನತು ಮಾಡಲಾಗಿದೆ.
ಈ ಘಟನೆ ಕೇರಳದಲ್ಲಿ ನಡೆದಿದೆ. ಸ್ಪೆಷಲ್ ಬ್ರಾಂಚ್ ವರದಿಯ ಪ್ರಕಾರ ಇಡುಕ್ಕಿ ಜಿಲ್ಲೆಯ ಸಾಂಥನಪರದ ಎಎಸ್ಐ ಕೆ.ಪಿ.
ಶಾಜಿ ಎಂಬುವರನ್ನು ಅಮಾನತು ಮಾಡಲಾಗಿದೆ. ಪೂಪ್ಪಾರ ಬಳಿ ದೇವಸ್ಥಾನದ ಉತ್ಸವದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಡಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಸ್ಪೆಷಲ್ ಬ್ರಾಂಚ್ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಅಮಾನತಿಗೆ ಮುಖ್ಯ ಕಾರಣವೆಂದರೆ, ಎಎಸ್ಐ ಕರ್ತವ್ಯದ ಸಮಯದಲ್ಲಿ ಸಮವಸ್ತ್ರದಲ್ಲೇ ಸಾರ್ವಜನಿಕರ ಮುಂದೆ ಡಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ಕರ್ತವ್ಯ ಲೋಪ ಎಸಗಿರುವುದು ವರದಿಯಲ್ಲಿ ಸ್ಪಷ್ಟವಾಗಿದೆ. ಮುನ್ನಾರ್ ಡಿವೈಎಸ್ಪಿ ನೀಡಿದ ವರದಿಯನ್ನು ಆಧರಿಸಿ ಎರ್ನಾಕುಲಂ ಡಿಐಜಿ, ಶಾಜಿಯನ್ನು ಅಮಾನತುಗೊಳಿಸಿದ್ದಾರೆ.
Laxmi News 24×7