ಪ್ರೆಸ್ಟೀಟ್ ಕಿಚನ್ ಗೋಡೌನ್ ಗೆ ಬೆಂಕಿ; ಕೋಟ್ಯಾಂತರ ರೂ. ನಷ್ಟ

Spread the love

ಗಂಗಾವತಿ: ಹಣ್ಣಿನ ಕೋಲ್ಡ್ ಸ್ಟೋರೆಜ್ ಹಾಗೂ ಪ್ರೆಸ್ಟೀಟ್ ಕಿಚನ್ ಸ್ಟೋರ್ ಗೋಡೌನ್ ಗೆ ಬೆಂಕಿ ಆಕಸ್ಮಿಕ ಬೆಂಕಿ ತಗುಲಿ ಕೋಟ್ಯಾಂತರ ರೂ. ನಷ್ಟವಾಗಿರುವ ಘಟನೆ ನಗರದ ಬನ್ನಿಗಿಡದ ಕ್ಯಾಂಪ್ ನಲ್ಲಿ ಏ.5ರ ಬುಧವಾರ ಮುಂಜಾನೆ ಸಂಭವಿಸಿದೆ.

ಅಕ್ಬರ್ ಸಾಬ ಹಾಗೂ ರಮೇಶ ಮಾರ್ವಾಡಿ ಎಂಬವವರಿಗೆ ಸೇರಿದ ಹಣ್ಣಿನ ಕೋಲ್ಡ್ ಸ್ಟೋರೆಜ್, ಪ್ರೇಸ್ಟೀಜ್ ಕಿಚನ್ ಹಾಗೂ ಎಲೆಕ್ಟ್ರಾನಿಕ್ ಅಂಗಡಿಗಳು ಎಂದು ತಿಳಿದು ಬಂದಿದೆ.

ಗೋಡೌನ್ ನಲ್ಲಿ ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು, ಇದರಿಂದಾಗಿ ಹಣ್ಣಿನ ಗೋಡೌನ್ ನಲ್ಲಿದ್ದ ಬಾಳೆಹಣ್ಣು, ಪ್ಲಾಸ್ಟಿಕ್ ಟ್ರೇಗಳು, ಟಾಟಾ ಎಸಿ ವಾಹನಗಳು, ಎಸಿ ಹಾಗೂ ನಾಲ್ಕು ಸಿಲಿಂಡರ್ ಗಳೊಂದಿಗೆ ಕೆಲ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಕಿಚನ್ ಹಾಗೂ ಎಲೆಕ್ಟ್ರಾನಿಕ್ ಸಾಮಾಗ್ರಿಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ ಎನ್ನಲಾಗಿದ್ದು, ಈ ಪರಿಣಾಮ ಕೋಟ್ಯಾಂತರ ರೂ. ನಷ್ಡವಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ವಾಹನ ಸಿಬ್ಬಂದಿ ಆಗಮಿಸಿದ್ದು, ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸಿಯಾಗಿದ್ದಾರೆ.

ಬೆಂಕಿ ಅನಾಹುತಕ್ಕೆ ಸಿಲಿಂಡರ್ ಸ್ಪೋಟವೋ ಅಥವಾ ವಿದ್ಯುತ್ ಶಾಟ್ ಸರ್ಕ್ಯೂಟ್ ಕಾರಣವೇ ಎಂಬುವ ನಿಖರ ಮಾಹಿತಿ ತಿಳಿದು ಬಂದಿಲ್ಲ.

ಜೆಸ್ಕಾಂ, ನಗರಸಭೆಯ ಅಧಿಕಾರಿಗಳು‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಅಮೇರಿಕಾರದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು: ಕುಟುಂಬಕ್ಕೆ 260 ಕೋಟಿ ಪರಿಹಾರ!

Spread the loveಸಿಯಾಟಲ್: ಅಮೆರಿಕದ ಸಿಯಾಟಲ್‌ನಲ್ಲಿ ವೇಗವಾಗಿ ಬಂದ ಪೊಲೀಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ