ಜಮಖಂಡಿ: ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಯಾವ ಕ್ಷೇತ್ರದಿಂದ ಸ್ಪಧಿ ìಸುತ್ತಾರೋ ಆ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಮತಕ್ಷೇತ್ರದಲ್ಲಿ ಎಲ್ಲ ಸ್ಥಾನಗಳಲ್ಲಿ ನಮ್ಮ ಪಕ್ಷ ಗೆಲುವು ದಾಖಲಿಸಲಿದೆ. ರಾಜ್ಯದಲ್ಲಿ 30ಕ್ಕೂ ಹೆಚ್ಚು ಸ್ಥಾನ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ. ಬಿಜೆಪಿ ತಮ್ಮನ್ನು ಈ ರೀತಿ ನಡೆಸಿಕೊಂಡಿರುವ ಬಗ್ಗೆ ಯಾವುದೇ ದ್ವೇಷವಿಲ್ಲ. ನಾನು ತಾಳ್ಮೆಯಿಂದ ರಾಜಕೀಯದಲ್ಲಿ ಧುಮುಕುತ್ತಿದ್ದೇನೆ. ನನ್ನ ಸಹೋದರ ಕರುಣಾಕರರೆಡ್ಡಿ, ಸೋಮಶೇಖರ ರೆಡ್ಡಿ, ಸ್ನೇಹಿತ ಶ್ರೀರಾಮುಲು ನಮ್ಮ ಪಕ್ಷಕ್ಕೆ ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಷಯ. ರಾಜಕೀಯದಲ್ಲಿ ಸ್ನೇಹ-ಸಂಬಂಧಗಳಿಗಿಂತ ಜನಸೇವೆ ಮುಖ್ಯ. ರಾಜಕೀಯಕ್ಕಾಗಿ ಸ್ನೇಹ ಮತ್ತು ಸಂಬಂಧ ದುರುಪಯೋಗ ಮಾಡಿಕೊಳ್ಳಲ್ಲ. ಫಲಿತಾಂಶ ನಂತರ ನನ್ನ ಪ್ರಣಾಳಿಕೆಗೆ ಯಾರು ಸ್ಪಂದಿಸುತ್ತಾರೋ ಅವರಿಗೆ ಬೆಂಬಲ ನೀಡುವ ಚಿಂತನೆ ಇದೆ. ಸ್ಟಾರ್ ಪ್ರಚಾರಕರನ್ನು ಕರೆಸಿಕೊಳ್ಳಬೇಕೆಂಬ ವಿಚಾರ ನಡೆಯುತ್ತಿದೆ. ನನ್ನನ್ನು ಶತಾಯಗತಾಯ ಸೋಲಿಸಬೇಕೆಂದು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಅವರ ಜಿದ್ದಿಗಿಂತ ನನ್ನ ಜಿದ್ದು ಹೆಚ್ಚಾಗುತ್ತದೆ ಎಂದರು.
Laxmi News 24×7