ಖಾನಾಪುರ: ತಾಲೂಕಿನ ದೇವಟ್ಟಿಯಿಂದ ಪಾರಿಷ್ವಾಡಕ್ಕೆ ಇಟ್ಟಿಗೆ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ದಾವಲ್ ಸಾಬ್ ಫಯಾಜ್ ಮುನವಳ್ಳಿ ಮೃತಪಟ್ಟವರು. ಚಾಲಕ ಮಂಜುನಾಥ ಚಂದ್ರು ಕುಕಡೊಳ್ಳಿ ಹಾಗೂ ಕಾರ್ಮಿಕ ಮಂಜುನಾಥ ಗುರನ್ನವರ ಗಾಯಗೊಂಡವರು.
ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಪಕ್ಕದಲ್ಲಿ ಪಲ್ಟಿಯಾಯಿತು. ಅಪಘಾತದಲ್ಲಿ ವಾಹನದಲ್ಲಿದ್ದ ಇಟ್ಟಿಗೆಗಳು ಸಹ ನಷ್ಟಕ್ಕೀಡಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.