Breaking News

ರಾಜ್ಯಕ್ಕೆ ಮತ್ತೆ ‘ಮೋದಿ’ ಆಗಮನ, ಏಪ್ರಿಲ್ 9 ರಂದು ‘ಬಂಡೀಪುರ’ಕ್ಕೆ ಪ್ರಧಾನಿ ಭೇಟಿ

Spread the love

ಗುಂಡ್ಲುಪೇಟೆ : ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಈಗಾಗಲೇ ಹಲವು ಬಾರಿ ಕರ್ನಾಟಕಕ್ಕೆ ಆಗಮಿಸಿದ್ದಾರೆ.

ಇದೀಗ ಏಪ್ರಿಲ್ 9 ರಂದು ಮತ್ತೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಹುಲಿ ಯೋಜನೆ 50 ವರ್ಷ ಪೂರೈಸಿದ ಹಿನ್ನೆಲೆ ಮೈಸೂರಿನಲ್ಲಿ ಏ 9 ರಂದು ನಡೆಯಲಿರುವ ಮೆಗಾ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ.

ಬಂಡೀಪುರಕ್ಕೆ ಆಗಮಿಸುವ ಮೋದಿ ‘ವಿದ್ಯುತ್ ಸ್ಪರ್ಶಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆನೆಯನ್ನು ರಕ್ಷಿಸಿದ್ದವರನ್ನು ಅಭಿನಂದಿಸಲಿದ್ದಾರೆ. ಮೋದಿ ಆಗಮನದ ಹಿನ್ನೆಲೆ ಈಗಾಗಲೇ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

ರಾಜ್ಯ ಹಿಂದುಳಿದ ವರ್ಗ’ಗಳ ‘ಮೀಸಲಾತಿ ಪ್ರಮಾಣ’ ಮರು ವರ್ಗೀಕರಿಸಿ ಸರ್ಕಾರ ಅಧಿಕೃತ ಆದೇಶ

ಬೆಂಗಳೂರು: ರಾಜ್ಯದ ಹಿಂದುಳಿದ ವರ್ಗಗಳಿಗೆ ( Backward Classes ) ಶಿಕ್ಷಣ ಮತ್ತು ಉದ್ಯೋಗದಲ್ಲಿ ( Education and Jobs ) ಕಲ್ಪಿಸಿರುವ ಮೀಸಲಾತಿಯನ್ನು ಮರು ವರ್ಗೀಕರಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಕುರಿತಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರು ನಡವಾಳಿ ಹೊರಡಿಸಿದ್ದು, ರಾಜ್ಯ ಹಿಂದುಳಿದ ವರ್ಗಗಳನ್ನು ಗುರುತಿಸಿ ಪ್ರವರ್ಗ-1, ಪ್ರವರ್ಗ-1ಎ, 2ಬಿ, 3ಎ ಮತ್ 3ಬಿ ಎಂದು ವರ್ಗೀಕರಿಸಿ, ಸದರಿ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಅನುಸಾರ ಪ್ರವರ್ಗಗಳಲ್ಲಿ ಸೇರ್ಪಡೆ ಮಾಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ ಎಂಬುದಾಗಿ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪಂಚಮಸಾಲಿ ವೀರಶೈವ ಲಿಂಗಾಯಿತ, ಒಕ್ಕಲಿಗೆ, ಮರಾಠ ಹಾಗೂ ಇನ್ನಿತರೆ ಸಮುದಾಯಗಳ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹಿಂದುಳಿದ ವರ್ಗಗಳ ಮರು ವರ್ಗೀಕರಣ ಹಾಗೂ ಮೀಸಲಾತಿಯನ್ನು ಹೆಚ್ಚಿಸಲು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿರುತ್ತದೆ. ಸುಮಾರು 20 ವರ್ಷಗ ಕಳೆದರೂ ಆಯೋಗದಿಂದ ಹಿಂದುಳಿದ ವರ್ಗಗಳ ಪಟ್ಟಿಯ ಪರಿಷ್ಕರಣೆಯ ಕಾರ್ಯ ಕೈಗೊಂಡಿರುವುದಿಲ್ಲ. ಹೀಗಾಗಿ ಪಟ್ಟಿಯನ್ನು ಪರಿಷ್ಕರಿಸುವ ಹಾಗೂ ಪುನರ್ ವರ್ಗೀಕರಣ ಕೈಗೊಳ್ಳುವ ಅವಶ್ಯವಿರುತ್ತದೆ ಎಂದಿದ್ದಾರೆ.ಹಿಂದುಳಿದ ವರ್ಗಗಳ ಆಯೋಗವು ಮೀಸಲಾತಿಯ ಪಟ್ಟಿಯಲ್ಲಿ ಹೊಸದಾಗಿ ಸೇರಿಸಲು ಹಾಗೂ ವರ್ಗಾಯಿಸಲು ಪಂಚಮಸಾಲಿ, ಲಿಂಗಾಯಿತ, ಮರಾಠ ಹಾಗೂ ಇತರೆ ಸಮುದಾಯವೂ ಸೇರಿದಂತೆ ರಾಜ್ಯ ಒಕ್ಕಲಿಗರ ಸಂಘ ಹಾಗೂ ಇತರೆ ಅನೇಕ ಸಂಘಗಳು ಸಲ್ಲಿಸಿರುವ ಬೇಡಿಕೆಯನ್ನು ಕಾನೂನು, ಸಂವಿಧಾನದ ಮತ್ತು ಸರ್ವೋಚ್ಛ ನ್ಯಾಯಾಲಯ ಇಂತಹ ಪ್ರಕರಣಗಳಲ್ಲಿ ನೀಡಿದ ತೀರ್ಪಿನ ಅಡಿಯಲ್ಲಿ ಪರಿಶೀಲಿಸಬೇಕಾಗಿರುತ್ತದೆ ಎಂದಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

Spread the loveಬೆಂಗಳೂರು: ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ