Breaking News

ಕಾಗವಾಡ: ದಾಖಲೆ ಇಲ್ಲದ ₹70 ಲಕ್ಷ ನಗದು ವಶ

Spread the love

ಕಾಗವಾಡ (ಬೆಳಗಾವಿ ಜಿಲ್ಲೆ): ಕಾಗವಾಡ- ಮಿರಜ್‌ ರಸ್ತೆಯ ಚೆಕ್‌ಪೋಸ್ಟ್‌ನಲ್ಲಿ ಬುಧವಾರ, ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹ 70 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಮಿರಜ್‌ನಿಂದ ಕಾಗವಾಡ ತಾಲ್ಲೂಕಿನ ಉಗಾರ ಪಟ್ಟಣಕ್ಕೆ ಬರುತ್ತಿದ್ದ ಕಾರಿನಲ್ಲಿ ಈ ಹಣ ಸಿಕ್ಕಿದೆ.

ಕಾರ್‌ ವಶಪಡಿಸಿಕೊಂಡ ಪೊಲೀಸರು ಚಾಲನಕನ್ನು ಬಂಧಿಸಿದ್ದಾರೆ. ಆದರೆ, ಹಣ ಯಾರಿಗೆ ಸೇರಿದ್ದು ಎಂಬ ಮಾಹಿತಿ ನೀಡಿಲ್ಲ.

ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದೆಡೆ ಹಾರೂಗೇರಿ ಚೆಕ್‌ಪೋಸ್ಟ್‌ನಲ್ಲಿ ಕೂಡ ₹2.30 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ. ಯರಗಟ್ಟಿ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ₹ 3.5 ಲಕ್ಷ ಮೊತ್ತದ ಹೊಲಿಗೆ ಯಂತ್ರಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಕುತೂಹಲ ಕೆರಳಿಸಿದ ಸತೀಶ್​ ಜಾರಕಿಹೊಳಿ ಡಿನ್ನರ್ ಪಾರ್ಟಿ: ಸಿಎಂ, ಅಹಿಂದ ಸಚಿವರು, ಶಾಸಕರಿಗೆ ಮಾತ್ರ ಆಹ್ವಾನ!

Spread the loveಬೆಳಗಾವಿ: ಚಳಿಗಾಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ರಾಜ್ಯ ನಾಯಕರು ಬಂದಿದ್ದೇ ಬಂದಿದ್ದು, ಡಿನ್ನರ್ ಪಾರ್ಟಿಗಳು ನಡೆಯುತ್ತಲೇ ಇವೆ. ಗುರುವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ