ಬೆಳಗಾವಿ: ಖಾನಾಪುರ ತಾಲೂಕಿನ ಕಸಬಾ ನಂದಗಡ ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಶ್ರೀಗಂಧದ ಕಟ್ಟಿಗೆ ವಶಪಡಿಸಿಕೊಂಡಿದ್ದಾರೆ.
ಆನಂದ ಮಾರುತಿ ರಾಮಣ್ಣವರ (25) ಬಂಧಿತ ಆರೋಪಿ. ಈತ ಶ್ರೀಗಂಧದ ಗಿಡವನ್ನು ಕಡಿದು ಅದರ ತುಂಡುಗಳನ್ನು ಸರ್ಕಾರದ ಯಾವುದೇ ಪಾಸ್, ಪರ್ಮಿಟ್, ಲೈಸನ್ಸ್ ಯಾವುದೂ ಇಲ್ಲದೆ ತನ್ನ ವಶದಲ್ಲಿ ಇಟ್ಟುಕೊಂಡು ಕಾನೂನು ಬಾಹಿರವಾಗಿ ಸಾಗಿಸುವ ಯತ್ನದಲ್ಲಿದ್ದ.
Laxmi News 24×7