Breaking News

ಶಾಲೆಗೆ ನುಗ್ಗಿ ಮದ್ಯ, ಗಾಂಜಾ ಸೇವಿಸಿ ನನಗೂ ಪಾಠ ಮಾಡಿ ಎನ್ನುವ ಯುವಕನ ಕಾಟ

Spread the love

ವಿಜಯನಗರ: ಹಳೆಯ ವಿದ್ಯಾರ್ಥಿಯೊಬ್ಬನ ದುರ್ವರ್ತನೆಗೆ ಹೊಸಪೇಟೆಯ ಊರಮ್ಮ ಬಯಲು ಪ್ರದೇಶದಲ್ಲಿರುವ ಶ್ರೀಮತಿ ಕಟ್ಟಾ ಕೃಷ್ಣ ವೇಣಮ್ಮ ಸ್ಮಾರಕ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ.

ವಿದ್ಯಾರ್ಥಿಗಳ ಮಧ್ಯೆ ಬಂದು, ಮದ್ಯ ಮಿಶ್ರಿತ ಜ್ಯೂಸ್ ಸೇವಿಸುತ್ತಾನೆ.

ಇಷ್ಟೇ ಅಲ್ಲದೆ, ಶಾಲೆಯಲ್ಲೇ ಗಾಂಜಾ ಹೊಡೆಯುತ್ತಾ ನನಗೂ ಪಾಠ ಮಾಡಿ ಅಂತಾ ಶಿಕ್ಷಕರನ್ನು ಕಾಡುತ್ತಿದ್ದಾನೆ.

ಆರೋಪಿಯನ್ನು ರಾಮು ಅಲಿಯಾಸ್ ಹೆಗ್ಗಣ ಎಂದು ಗುರುತಿಸಲಾಗಿದೆ. ಈತ ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾನೆ. ಗಾಂಜಾ, ಅಫೀಮ್ ಸೇವನೆ ಮಾಡುವ ಈತ ತರಗತಿ ನಡೆಯುವಾಗ ದಿಢೀರನೇ ಒಳಗಡೆ ನುಗ್ಗುತ್ತಾನೆ. ವಿದ್ಯಾರ್ಥಿಗಳ ಮಧ್ಯೆ ಬಂದು ಕುಳಿತುಕೊಳ್ಳುತ್ತಾನೆ. ಬಳಿಕ ಜ್ಯೂಸ್ ಒಳಗೆ ಮದ್ಯ ಹಾಕಿಕೊಂಡು ಕುಡಿಯುತ್ತಾನೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ನಾನು ಜ್ಯೂಸ್ ಕುಡಿಯುತ್ತಿದ್ದೇನೆ ಎಂದು ಹೇಳುತ್ತಾನೆ.

 

1 ರಿಂದ 10 ತರಗತಿಯವರೆಗೆ 300 ಮಕ್ಕಳಿರುವ ಶಾಲೆಯಲ್ಲಿ ಈತ ನಿತ್ಯವೂ ಕಿರಿಕ್ ಮಾಡುತ್ತಿದ್ದಾನೆ. ಹೊಸಪೇಟೆಯ ಈ ಶಾಲೆಯಲ್ಲಿ ಭದ್ರತೆ ಇಲ್ಲದಿರುವುದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗುತ್ತಿದೆ. ಯಾರೂ ಇಲ್ಲದಾಗ ಶಾಲೆಯ ಆವರಣದಲ್ಲೂ ಕುಡಿಯುತ್ತಾನೆ. ಶಾಲೆ ಇದ್ದಾಗಲೂ ತರಗತಿಗಳಿಗೆ ನುಗ್ಗಿ ಪಾಠ ಮಾಡುವ ಮೇಷ್ಟ್ರುಗಳಿಗೂ ಅವಾಜ್​ ಹಾಕಿ ಕಾಟ ಕೊಡುತ್ತಾನೆ.

ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಟ್ಟರು ಯಾವುದೇ ಪ್ರಯೋಜನವಿಲ್ಲ ಎಂದು ಸಿಬ್ಬಂದಿ ಹೇಳ್ತಿದ್ದಾರೆ. ಪೊಲೀಸರಿಗೂ ಈತ ತಲೆಬ್ಯಾನಿ ಆಗಿದ್ದಾನಂತೆ. ಒಟ್ಟಾರೆ ಹಳೆಯ ವಿದ್ಯಾರ್ಥಿಯ ಕಿರಿಕ್​ಗೆ ಶಾಲೆಯ ಎಲ್ಲರು ಹೈರಾಗಿದ್ದಾರೆ


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ