ಬೆಂಗಳೂರು: ಸಂಬಳ ಹೆಚ್ಚಳಕ್ಕಾಗಿ ಸರ್ಕಾರಿ ನೌಕರರು ತಂಡೋಪತಂಡವಾಗಿ ಪ್ರತಿಭಟನೆ/ಮುಷ್ಕರ ನಡೆಸಿದ್ದು ಫಲ ಕೊಟ್ಟಿದ್ದು, ಇದೀಗ ಸಾರಿಗೆ ನೌಕರರ ವಿಷಯದಲ್ಲೂ ಅದು ನಿಜವಾಗಿದೆ. ನಾಲ್ಕೂ ನಿಗಮದ ಸಾರಿಗೆ ನೌಕರರ ವೇತನವನ್ನು ಸರ್ಕಾರ ಹೆಚ್ಚಳ ಮಾಡಿದೆ.
ವೇತನ ಹೆಚ್ಚಳವನ್ನೇ ಪ್ರಮುಖ ಬೇಡಿಕೆ ಆಗಿರಿಸಿಕೊಂಡು ಸಾರಿಗೆ ನೌಕರರು ಕೆಲವು ದಿನಗಳಿಂದ ಪ್ರತಿಭಟನೆ ನಡೆಸಿದ್ದು, ನೌಕರರು ಶೇ. 20 ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದರೂ ಕೊನೆಗೆ ಸರ್ಕಾರ ಶೇ. 15 ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಮಾರ್ಚ್ 1ರಿಂದಲೇ ಅನ್ವಯಿಸುವಂತೆ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಅರಿಯರ್ಸ್ ಹಾಗೂ ಇತರೆ ಬಾಕಿ ಇತ್ಯರ್ಥಕ್ಕೆ ಒಂದು ತಿಂಗಳ ಕಾಲಮಿತಿಯೊಂದಿಗೆ ಆದೇಶಿಸಲಾಗಿದ್ದು, ನಾಲ್ಕು ನಿಗಮಗಳ ಪುನಶ್ಚೇತನಕ್ಕಾಗಿ ರಚಿಸಿದ ಏಕಸದಸ್ಯ ಸಮಿತಿಗೆ ವರದಿ ಸಲ್ಲಿಸಲಿಕ್ಕೂ ಸೂಚನೆ ನೀಡಲಾಗಿದೆ.