Breaking News

ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೊಮ್ಮೆ ಸಲ್ಮಾನ್ ಖಾನ್​ಗೆ ಜೀವ ಬೆದರಿಕೆ ಹಾಕಿದ್ದಾರೆ

Spread the love

ವದೆಹಲಿ: ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೊಮ್ಮೆ ಸಲ್ಮಾನ್ ಖಾನ್​ಗೆ ಜೀವ ಬೆದರಿಕೆ ಹಾಕಿದ್ದಾರೆ . ಅವರು ಇತ್ತೀಚೆಗೆ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ಅವರ ಜೀವನದ ಗುರಿ ಎಂದು ಹೇಳಿದ್ದಾರೆ.

ಕೃಷ್ಣಮೃಗವನ್ನು ಕೊಂದದ್ದಕ್ಕಾಗಿ ಸಲ್ಮಾನ್​ ಖಾನ್​ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ವಿಷಯ ಕೊನೆಗೊಳ್ಳುತ್ತದೆ ಎಂದು ಲಾರೆನ್ಸ್​ ಬಿಷ್ನೋಯ್​ ಹೇಳಿದರು.

‘ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಅವರು ಬಿಕಾನೇರ್‌ನಲ್ಲಿರುವ ನಮ್ಮ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ನನ್ನ ಜೀವನದ ಗುರಿ. ಸಲ್ಮಾನ್ ಖಾನ್ ಅವರ ಭದ್ರತೆಯನ್ನು ತೆಗೆದುಹಾಕಿದರೆ ನಾನೇ ಅವನನ್ನು ಕೊಲ್ಲುತ್ತೇನೆ ಎಂದು ಬಿಷ್ಣೋಯ್ ಹೇಳಿದ್ದಾರೆ.

 

‘ಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ ಈ ವಿಷಯ ಕೊನೆಗೊಳ್ಳುತ್ತದೆ. ಸಲ್ಮಾನ್ ಅಹಂಕಾರಿ. ಮೂಸ್ ವಾಲಾ ಕೂಡ ಹಾಗೇ ಇದ್ದ. ಸಲ್ಮಾನ್ ಖಾನ್‌ನ ಅಹಂ ರಾವಣನಿಗಿಂತ ದೊಡ್ಡದಾಗಿದೆ. ಸಲ್ಮಾನ್ ಖಾನ್ ಬಗ್ಗೆ ನಮ್ಮ ಸಮಾಜದಲ್ಲಿ ಕೋಪವಿದೆ. ಅವರು ನನ್ನ ಸಮಾಜವನ್ನು ಅವಮಾನಿಸಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಅವರು ಕ್ಷಮೆ ಕೇಳಲಿಲ್ಲ. ಅವರು ಕ್ಷಮೆಯಾಚಿಸದಿದ್ದರೆ, ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಬೇಕು. ನಾನು ಬೇರೆಯವರನ್ನು ಅವಲಂಬಿಸುವುದಿಲ್ಲ’ ಎಂದು ಲಾರೆನ್ಸ್​ ಬಿಷ್ನೋಯ್​ ಹೇಳಿದ್ದಾರೆ.

ಕ್ಷಮೆಯಾಚಿಸಲು ತಮ್ಮ ಆರಾಧ್ಯ ದೈವದ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಲಾರೆನ್ಸ್​ ಬಿಷ್ನೋಯ್ ಸಲ್ಮಾನ್​ ಖಾನ್​ಗೆ ಹೇಳಿದ್ದರು. ‘ಅವರು ನಮ್ಮ ದೇವರ ಗುಡಿಗೆ ಬಂದು ಕ್ಷಮೆ ಕೇಳಬೇಕು. ನಮ್ಮ ಸಮಾಜ ಕ್ಷಮಿಸಿದರೆ ನಾನೇನೂ ಹೇಳುವುದಿಲ್ಲ,’ ಎಂದು ಹೇಳಿದ್ದರು.

 


Spread the love

About Laxminews 24x7

Check Also

ಗೋಮಾಳದಲ್ಲಿ ಅವೈಜ್ಞಾನಿಕ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಯತ್ನ: ವಿರೋಧಿಸಿ ತಹಶಿಲ್ದಾರ್ ಕಚೇರಿಗೆ ಕುರಿ ನುಗ್ಗಿಸಿ ಪ್ರತಿಭಟನೆ

Spread the loveದಾವಣಗೆರೆ: ಗೋಮಾಳ‌ ಜಾಗವನ್ನು ಸರ್ಕಾರಿ ಕಟ್ಟಡ ನಿರ್ಮಾಣ ಮಾಡಲು ಮಂಜೂರು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ದಾವಣಗೆರೆ ಜಿಲ್ಲೆಯ ನ್ಯಾಮತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ