Breaking News

ಗಂಡು ಮಗು ಜನಿಸಲಿಲ್ಲವೆಂದು ನೆರೆಮನೆಯ ಗಂಡು ಮಗುವನ್ನು ಕೊಲೆಗೈದ ಮಹಿಳೆಗೆ ಜೀವಾವಧಿ ಶಿಕ್ಷೆ

Spread the love

ಚಿಕ್ಕೋಡಿ: ಗಂಡು ಮಗು ಜನಿಸಲಿಲ್ಲವೆಂದು ಹತಾಶೆಗೊಂಡು ಸಂಬಂಧಿಕರ ಗಂಡು ಮಗುವನ್ನು ನೀರಿನ ಬ್ಯಾರಲ್ ನಲ್ಲಿ ಮುಳುಗಿಸಿ ಕೊಲೆ ಮಾಡಿದ ಆರೋಪಿ ಮಹಿಳೆಗೆ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.

 

ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಜಯಶ್ರೀ ಬಾಹುಬಲಿ ಅಲಾಸೆ ಎಂಬ ಮಹಿಳೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.

ಕಳೆದ ದಿ.24-8-2018 ರಂದು ಶೇಡಬಾಳ ಗ್ರಾಮದ ಕುರುಬರ ಗಲ್ಲಿಯ ರಾಜು ತಾತ್ಯಾಸಾಬ ಅಲಾಸೆ ಎಂಬುವವರ ಮಗುವನ್ನು ಆರೋಪಿತಳು ನನಗೆ ಗಂಡು ಮಗು ಜನಿಸಲಿಲ್ಲ ಎಂಬ ಹತಾಶೆಯಿಂದ ಕಾರ್ತಿಕ ಎಂಬ ಎರಡುವರೆ ವರ್ಷದ ಗಂಡು ಮಗುವನ್ನು ಮನೆಗೆ ಕರೆದುಕೊಂಡು ಹೋಗಿ ನೀರಿನ ಬ್ಯಾರೇಲ್ ಒಳಗೆ ಹಾಕಿ ಕೊಲೆ ಮಾಡಿರುವ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಡಸ್.ಎಲ್.ಚೌವ್ಹಾಣ ಅವರು ಆರೋಪಿತಳಾದ ಜಯಶ್ರೀ ಅಲಾಸೆಗೆ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಅಭಿಯೋಜಕ ವೈ.ಜಿ.ತುಂಗಳ ವಾದ ಮಂಡಿಸಿದ್ದರು.


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ