Breaking News

ನಿಪ್ಪಾಣಿ-ಕಾಕಾಸಾಹೇಬ್ ಪಾಟೀಲ್, ಹುಕ್ಕೇರಿ-ಎ.ಬಿ.ಪಾಟೀಲ್ ಅಭ್ಯರ್ಥಿಗಳ ಪಟ್ಟಿ ನಾಳೆಯೇಬಿಡುಗಡೆ

Spread the love

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಫೈನಲ್ ಆಗಿದ್ದು, ನಾಳೆಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

224 ವಿಧಾನಸಭಾ ಕ್ಷೇತ್ರಗಳ ಪೈಕಿ 155 ಕ್ಷೇತ್ರಗಳ ಅಭ್ಯರ್ಥಿಗಳ ಲಿಸ್ಟ್ ಫೈನಲ್ ಆಗಿದ್ದು, 66 ಕ್ಷೇತ್ರಗಳಿಗೆ ಒಬ್ಬೊಬ್ಬ ಅಭ್ಯರ್ಥಿಗಳ ಹೆಸರು ಅಂತಿಮವಾಗಿದ್ದು, 89 ಕ್ಷೇತ್ರಗಳಿಗೆ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಸ್ಕ್ರೀನಿಂಗ್ ಕಮಿಟಿ ಸಭೆ ಸೂಚಿಸಿದೆ. ಇಬ್ಬರಲ್ಲಿ ಒಬ್ಬರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಬೇಕಿದೆ.

ಸ್ಕ್ರೀನಿಂಗ್ ಕಮಿಟಿ ಹೈಕಮಾಂಡ್ ಗೆ ರವಾನಿಸಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ: ನಿಪ್ಪಾಣಿ-ಕಾಕಾಸಾಹೇಬ್ ಪಾಟೀಲ್, ಹುಕ್ಕೇರಿ-ಎ.ಬಿ.ಪಾಟೀಲ್, ಕೋಲಾರದಿಂದ – ಮಾಜಿ ಸಿಎಂ ಸಿದ್ದರಾಮಯ್ಯ, ಕಡೂರು-ವೈ.ಎಸ್.ವಿ ದತ್ತಾ, ಬಸವನಗುಡಿ – ಯು.ಬಿ.ವೆಂಕಟೇಶ್, ರಾಜಾಜಿನಗರ- ಪುಟ್ಟಣ್ಣ, ಕಾರವಾರ-ಸತೀಶ್ ಸೈಲ್, ಭಟ್ಕಳ-ಮಂಕಾಳ ವೈದ್ಯ, ಹಿರಿಯೂರು-ಸುಧಾಕರ್, ಚಿತ್ರದುರ್ಗ- ವೀರೇಂದ್ರ ಪಪ್ಪಿ, ಹಿರೇಕೇರೂರು-ಯು.ಬಿ.ಬಣಕಾರ್, ಕನಕಗಿರಿ-ಶಿವರಾಜ್ ತಂಗಡಗಿ, ಚಿಂತಾಮಣಿ-ಎಂ.ಸಿ.ಸುಧಾಕರ್, ಚಿಕ್ಕಬಳ್ಳಾಪುರ-ಕೊತ್ತೂರು ಮಂಜುನಾಥ್, ಯಲಬುರ್ಗಾ-ಬಸವರಾಜ್ ರಾಯರೆಡ್ಡಿ, ಹಾನಗಲ್-ಶ್ರೀನಿವಾಸ್ ಮಾನೆ, ರಾಮನಗರ-ಇಕ್ಬಾಲ್ ಹುಸೇನ್, ಮಾಗಡಿ-ಬಾಲಕೃಷ್ಣ, ಸೊರಬ-ಮಧು ಬಂಗಾರಪ್ಪ, ವಿರಾಜಪೇಟೆ ಪೊನ್ನಣ್ಣ, ಹೊಸಕೋಟೆ-ಶರತ್ ಬಚ್ಚೇಗೌಡ, ಟಿ.ನರಸಿಪುರ-ಸುನೀಲ್ ಬೋಸ್ ಸೇರಿದಂತೆ 66 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ