Breaking News

ಸಾದಾ ಹೊಟೇಲ್‌ನಲ್ಲಿ ಜನರ ಮಧ್ಯ ಭರಪೂರ ನ್ಯಾರಿ ಮಾಡಿದ ಸಚಿವರು !

Spread the love

ಬಕವಿ-ಬನಹಟ್ಟಿ : ಹಾ.. ನಿಮ್ಗೇನ್ ಬೇಕ್ರಿ..? ಕೊಡ್ತೀನಿ ತಡ್ರೀ.. ಹೀಗೆ ಸಾಮಾನ್ಯ ಹೊಟೇಲ್‌ನಲ್ಲಿ ಗ್ರಾಹಕರನ್ನು ಕೇಳುವುದು ರೂಢಿ. ಇಂತಹ ಹೊಟೇಲ್‌ನಲ್ಲಿ ನೀರಾವರಿ ಸಚಿವ ಗೋವಿಂದ ಕಾರಜೋಳ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಸಿದ್ದು ಸವದಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಮನೋಹರ ಶಿರೋಳ ಸೇರಿದಂತೆ ಅನೇಕರು ಸಾಮಾನ್ಯ ಹೊಟೇಲ್‌ನಲ್ಲಿ ಸಾಮಾನ್ಯರಂತೆ ಯಾವದೇ ಬಿಗುಮಾನವಿಲ್ಲದೆ ಜನರ ಮಧ್ಯದಲ್ಲಿಯೇ ಖಾರದ ಚಪಾತಿ, ಶೇಂಗಾ ಉಸುಳಿ ಭರಪೂರ ನ್ಯಾರಿ ಮಾಡಿದ ಪ್ರಸಂಗ ನಡೆಯಿತು.

 

ಮಂಗಳವಾರ ಬಾಗಲಕೋಟ ಜಿಲ್ಲೆಯ ಬನಹಟ್ಟಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಮುಂಚೆ ಉಪಹಾರ ಸಮಯಕ್ಕೆ ಸಾಮಾನ್ಯ ಹೊಟೇಲ್ ಮುಂದೆ ಏಕಾಏಕಿ ಕಾರ್‌ಗಳ ನಿಲುಗಡೆ ನಿಜಕ್ಕೂ ನಗರದ ನೇಕಾರರಲ್ಲಿ ವಿಶೇಷವೆನಿಸಿತ್ತು. ನೇಕಾರ ಪ್ರಿಯವಾದ ಶೇಂಗಾ ಉಸುಳಿ-ಚಪಾತಿಗೆ ಫೇಮಸ್ ಆಗಿರುವ ಶೇಖರಯ್ಯ ಮಠದ ಹೊಟೇಲ್‌ಗೆ ಜನಪ್ರತಿನಿಧಿಗಳೇ ದಂಡೇ ಆವರಿಸಿದಾಗ ಹೊಟೇಲ್ ಮಾಲಿಕ ಕ್ಷಣ ಹೊತ್ತು ದಿಗ್ಭ್ರಾಂತನಾಗಿ ನಂತರ ನಿಮ್ಗೇನ್ ಬೇಕ್ರೀ..? ಎಂದು ಎಲ್ಲರನ್ನೂ ಕೇಳಿ ಉಪಹಾರ ಬಡಿಸಿದ.


Spread the love

About Laxminews 24x7

Check Also

ಒಂದೇ ದಿನ ನಾಲ್ಕು ಪ್ರಕರಣ ದಾಖಲು, 7 ಜನರ ಬಂಧನ; ₹12,840 ನಗದು ಜಪ್ತಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ದಾಳಿ

Spread the love ಒಂದೇ ದಿನ ನಾಲ್ಕು ಪ್ರಕರಣ ದಾಖಲು, 7 ಜನರ ಬಂಧನ; ₹12,840 ನಗದು ಜಪ್ತಿ ಮಾರ್ಕೆಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ