ಕುಷ್ಟಗಿ:ಕಾಂಗ್ರೆಸ್ಸಿಗೆ ಹೇಳಿಕೊಳ್ಳುವ ನೇತೃತ್ವವೇ ಇಲ್ಲ, ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಆಕ್ಸಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಭಾರತದ ಪ್ರಜಾಪ್ರಭುತ್ವದ ಅವಹೇಳನವನ್ನು ರಾಹುಲ್‌ಗಾಂಧಿ ಮಾಡಿದರು.
ಯಾರು ನಮ್ಮ ದೇಶವನ್ನುಇನ್ನೂರು ವರ್ಷಗಳ ಕಾಲ ಕೊಳ್ಳೆ ಹೊಡೆದರೋ ಅವರನ್ನು ಮಧ್ಯ ಪ್ರವೇಶ ಮಾಡಿ ಎಂದು ದೇಶದ ಸಾರ್ವಭೌಮಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪರಕೀಯರ ಮದ್ಯ ಪ್ರವೇಶಿಸುವಂತಹ ಮುಖಂಡತ್ವ ಆಗಿದೆ ಎಂದರು.
ನಮ್ಮ ನಿಯತ್ತು ಹಾಗೂ ಕಾಂಗ್ರೆಸ್ ನಿಯತ್ತು ಹೋಲಿಕೆ ಮಾಡುವ ಅಗತ್ಯವಾಗಿದೆ. ಸೈನ್ಯಕ್ಕೆ ಗೌರವಿಸುವುದು ನಮ್ಮ ನಿಯತ್ತು ಸೈನ್ಯಕ್ಕೆ ಅವಮಾನಿಸುವುದು ಕಾಂಗ್ರೆಸ್ ನೇತೃತ್ವವಾಗಿದೆ ಎಂದರು. ದೇಶದ ಹಿತಕ್ಕೆ ಸಿಎಎ, 370 ಜಾರಿಗೆ ತಂದರೆ ಅದನ್ನುಕಾಂಗ್ರೆಸ್ ವಿರೋಧಿಸಿತು. ಸೋತಾಗ ಇವಿಎಂ ಬಗ್ಗೆ ಅನುಮಾನ ವ್ಯಕ್ತ ಪಡಿಸುವ ಕಾಂಗ್ರೆಸ್ ಗೆದ್ದಾಗ ಜನಾದೇಶ ಎನ್ನುವುದು ಕಾಂಗ್ರೆಸ್ಸಿಗೆ ಇರುವ ದ್ವಂದ್ವ ನಿಲುವು ಇದೆ. ಆದರೆ ನಮ್ಮ ಪಕ್ಷ ನಿಯತ್ತು, ನೇತೃತ್ವದ ಮೇಲೆ ಮತದಾರರಿಗೆ ಓಟು ಕೇಳುತ್ತೇವೆ ಎಂದರು.
ಬಿಜೆಪಿಯಿಂದ ದೇಶದ ಗೌರವ ಹೆಚ್ಚಾಗಿದೆ
ಭಾರತೀಯ ಸಂಸ್ಸೃತಿಯ ಅಸ್ಮಿತೆಯ ಕಡೆಗಾಣಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಆಕ್ರಮಣಕಾರರ ಇತಿಹಾಸವೇ ಭಾರತೀಯ ಇತಿಹಾಸ ಎಂದು ಬಿಂಬಿಸುವ ಕೆಲಸ ಕಾಂಗ್ರೆಸ್ ಮಾಡಿತು. ದೇಶದ ಇತಿಹಾಸ ಸಹಾಸದ ಸಾವಿರಾರು ವರ್ಷಗಳ ಸುಸಂಸ್ಕೃತ ನಾಗರೀಕ ವ್ಯವಸ್ಥೆೆ ಎಂದು ಬಿಜೆಪಿ ಮಾಡಿರುವುದು ನಮ್ಮ ನೀತಿಯಾಗಿದೆ. ಯೋಗಕ್ಕೆ ಆಯುರ್ವೇದ ಕ್ಕೆ ಮಹತ್ವ ಸಿಕ್ಕಿದ್ದು ಇಂದು ಭಾರತದ ಪಾಸಪೋರ್ಟಗೆ ಜಗತ್ತಿನಲ್ಲಿ ಗೌರವ ಇದ್ದು ದೇಶಕ್ಕೆ ಗೌರವ ತಂದು ಕೊಡುವ ಕೆಲಸ ಬಿಜೆಪಿಯಿಂದ ಆಗಿದೆ ಎಂದ ಅವರು, ನಮ್ಮ ನೇತೃತ್ವ ಜಗತ್ತು ಗೌರವಿಸುವ ನೇತೃತ್ವ ಆಗಿದ್ದು ಯಾರೋ ಹೇಳಿ ಹೊಗಳಿಸುವ ನೇತೃತ್ವ ಅಲ್ಲ ಎಂದರು.
ಕೊಪ್ಪಳ ಜಿಲ್ಲೆ ಐದಕ್ಕೂ ಐದು ಬಿಜೆಪಿ
. ಈಗಿನ ವಾತವರಣ ಗಮನಿಸಿದರೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಕೊಪ್ಪಳದಲ್ಲಿ ಕಳೆದ ಬಾರಿ 5ರಲ್ಲಿ 3 ಸ್ಥಾನ ಬಿಜೆಪಿ ಗೆದ್ದಿತ್ತು ಆದರೆ ಈಬಾರಿ 5 ಸ್ಥಾನ ಗೆಲ್ಲುವ ಪ್ರಯತ್ನ ನಮ್ಮದಾಗಿದೆ. 2008, 2018 ಇರಲಿ ನಿಚ್ಚಳ ಬಹುಮತ ಬರಲಿಲ್ಲ. ಕಾರಣಾಂತರಗಳಿಂದ ರಾಜಕೀಯ ರಾಜೀ ಮಾಡಬೇಕಾಯ್ತು. ರಾಜಕೀಯ ರಾಜೀ ಇಲ್ಲದೇ ಪೂರ್ಣ ಬಹುಮತ ಕೊಡಿ ನಮ್ಮ ಆಶಯ ಸಿದ್ದಂತೆ ತಕ್ಕಂತೆ ಆಡಳಿತ ನಡೆಸುವ ವಿಶ್ವಾಸ ವ್ಯಕ್ತಪಡಿಸಿದರು.
Laxmi News 24×7