ಹಾಸನ: ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ಅಭ್ಯಾಸ ಶುರುವಾಗಿದೆ. ಯಾರು ಏನೇ ಮಾಡಿದ್ರು ಅದು ನನ್ನದು ಎಂದು ಹೇಳುತ್ತಾರೆ. ಎಮ್ಮೆನೋ..ಹಸುನೋ.. ಸುಂದರವಾದ ಕರು ಹಾಕಿದರು ಸಿದ್ದರಾಮಯ್ಯ ಅದು ನನ್ನದು ಅಂತಾರೆ ಎಂದು ಬಿಜೆಪಿ ವಿಜಯ ಸಂಕಲ್ಪಯಾತ್ರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಹಾಸನ ಅರಸೀಕೆರೆ ತಾಲೂಕ್ ಬೇಲೂರು ವಿಧಾನ ಸಭಾ ಕ್ಷೇತ್ರ ಜಾವಗಲ್ನಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಜನಕವೇ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಕಾಲದಲ್ಲಿ ಭ್ರಷ್ಟಾಚಾರ ಎನ್ನುವ ಪದ ಕಮ್ಮಿ ಆಗಿ ಹಗರಣ ಪದ ಶುರುವಾಯಿತ್ತು. ನಾವು ಇತ್ತೀಚೆಗೆ ಅಧಿಕಾರಕ್ಕೆ ಬಂದಿದ್ದೇವೆ. ಲೋಕಾಯುಕ್ತಕ್ಕೆ ಅಧಿಕಾರ ಕೊಟ್ಟು ಬಲ ಪಡಿಸಿರುವುದು ಬಿಜೆಪಿ. ಲೋಕಾಯುಕ್ತ ಬಗ್ಗೆ ಸರ್ಕಾರಕ್ಕೆ ಅಡ್ವೈಸ್ ಮಾಡಿದ್ರು , ಸುಪ್ರೀಂ ಕೋರ್ಟ್ ಗೆ ಅಪೀಲ್ ಹೋಗೊಕೆ ಹೇಳಿದ್ದು ಕಾಂಗ್ರೆಸ್ ಅವರು ಎಂದಿದ್ದಾರೆ.