ಬೆಳಗಾವಿ: ಬೆಳಗಾವಿ ಜಿಲ್ಲಾ ಬಿಜೆಪಿ ಘಟಕದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಮಾಜಿ ಡಿಸಿಎಂ ಲಕ್ಷ್ಮನ ಸವದಿ ಹಾಗೂ ರಮೇಶ್ ಜಾರಕಿಹೊಳಿ ನಡುವೆ ವೈಮನಸ್ಸು ಇರುವುದು ಗೊತ್ತಿರುವ ವಿಚಾರ. ಈಗ ಅಥಣಿ ಬಿಜೆಪಿ ಟಿಕೆಟ್ ವಿಚಾರವಾಗಿಯೂ ಬಣ ಬಡಿದಾಟ ಆರಂಭವಾಗಿದೆ.
ಅಥಣಿ ಬಿಜೆಪಿ ಟಿಕೆಟ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ಅಥಣಿ ಕ್ಷೇತ್ರದ ಜನರು ನಾನು ಸ್ಪರ್ಧೆ ಮಾಡಲಿ ಎಂದು ಹೇಳುತ್ತಿದ್ದಾರೆ. ಪಕ್ಷದ ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳಲಿದೆ ನೋಡಬೇಕು ಎಂದು ಹೇಳಿದ್ದಾರೆ.ಈ ಮೂಲಕ ಅಥಣಿ ಟಿಕೆಟ್ ತಮಗೆ ಸಿಗುತ್ತದೆ ಎಂಬ ಬಗ್ಗೆ ಸ್ವತ: ಲಕ್ಷ್ಮಣ ಸವದಿ ಅವರಿಗೇ ವಿಶ್ವಾಸವಿದ್ದಂತೆ ಇಲ್ಲ ಎನ್ನಲಾಗಿದೆ.
Laxmi News 24×7