ಕಾನೂನು ಅರಿವಿನಿಂದ ಮಾತ್ರ ಮಹಿಳೆಯರು ಮುಖ್ಯವಾಹಿನಿಗೆ ಬರಲು ಸಾಧ್ಯ : ನ್ಯಾಯವಾದಿ ಪ್ರೀತಿ ಕುಕಡೆ
ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಕಾನೂನಿನ ಅರಿವು ಇಲ್ಲದೆ ವಿವಿಧ ರೀತಿಯ ದೌರ್ಜನ್ಯಕ್ಕೆ ಮಹಿಳೆಯರು ಒಳಗಾಗುತ್ತಿದ್ದಾರೆ.ಆದ್ದರಿಂದ ಮಹಿಳೆಯರಲ್ಲಿ ಕಾನೂನು ಅರಿವು ಮೂಡಿದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು.ಜೊತೆಗೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಬಹುದು ಎಂದು ಸಮಾಜ ಸೇವಕಿ ಹಾಗೂ ನ್ಯಾಯವಾದಿ ಪ್ರೀತಿ ಕುಕಡೆ ಹೇಳಿದರು.
ಮೇದಾರ ಓಣಿ ಬೆಳಗಾವಿಯಲ್ಲಿ ಇಂದು ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ನ್ಯಾ.ಪ್ರೀತಿ ಕುಕಡೆ ಅವರು ಮಹಿಳಾ ದಿನಾಚರಣೆ ಉದ್ದೇಶಿಸಿ ಮಾತನಾಡಿ ನಾನು ವೃತ್ತಿಯಲ್ಲಿ ವಕೀಲೆ ಆಗಿರುವುದರಿಂದ ಕೈಲಾದಷ್ಟು ಕಾನೂನಿನ ಸಲಹೆ ನೀಡಲು ಬಯಸುತ್ತೆನೆ.ಯಾವುದೇ ಹಿಂಜರಿಕೆ ಇಲ್ಲದೆ ತಾವು ನನ್ನನ್ನು ಸಂಪರ್ಕಿಸಿ ಉಚಿತವಾಗಿ ಕಾನೂನು ಸಲಹೆ ಪಡೆದುಕೊಳ್ಳಬಹುದು ಎಂದರು.*