Breaking News

ಮದುವೆಯಾಗಿ ಮಕ್ಕಳನ್ನು ಪಡೆಯಲೇಬೇಕೇ? ಕಟೀಲ್‌ಗೆ ನಟ ಚೇತನ್‌ ಪ್ರಶ್ನೆ

Spread the love

ಬೆಂಗಳೂರು: ಲಸಿಕೆ ಪಡೆದರೆ ಮಕ್ಕಳಾಗದೆಂಬ ಸಿದ್ದರಾಮಯ್ಯ ಅವರ ಮಾತು ಕೇಳಿ ರಾಹುಲ್ ಗಾಂಧಿ ಮದುವೆ ಆಗುತ್ತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿಕೆಗೆ ನಟ ಚೇತನ್‌ ಅಹಿಂಸಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

ಕಟೀಲ್‌ ಹೇಳಿಕೆಯು ಕೀಳು ಮಟ್ಟದ್ದು ಮತ್ತು ತರ್ಕವಿಲ್ಲದ್ದು ಎಂದು ಚೇತನ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಸಾಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕು ಬಿಜೆಪಿ ಪೇಜ್ ಪ್ರಮುಖರ ಸಭೆಯಲ್ಲಿ ಮಾತನಾಡಿದ್ದ ಕಟೀಲ್‌, ‘ಕೊರೊನಾ ಲಸಿಕೆ ಹಾಕಿಸಿಕೊಂಡರೆ ಮಕ್ಕಳಾಗುವುದಿಲ್ಲ ಎಂದು ಸಿದ್ದರಾಮಯ್ಯ ಜನರಿಗೆ ತಪ್ಪು ಮಾಹಿತಿ ನೀಡಿದ್ದರು. ಆದರೂ ಕಾಂಗ್ರೆಸ್ ನಾಯಕರು ಕೊರೊನಾಕ್ಕೆ ಹೆದರಿ ಲಸಿಕೆ ಹಾಕಿಸಿಕೊಂಡರು. ಲಸಿಕೆ ಪಡೆದರೆ ಮಕ್ಕಳಾಗುವುದಿಲ್ಲ ಎಂಬ ಸಿದ್ದರಾಮಯ್ಯ ಅವರ ಮಾತು ಕೇಳಿ ರಾಹುಲ್ ಗಾಂಧಿ ಮದುವೆ ಆಗುತ್ತಿಲ್ಲ’ ಎಂದು ಅವರು ವ್ಯಂಗ್ಯವಾಡಿದ್ದರು.

 

 

ಈ ಹಿನ್ನೆಲೆಯಲ್ಲಿ ಮಂಗಳವಾರ ಟ್ವೀಟ್‌ ಮಾಡಿರುವ ಚೇತನ್‌ ಅವರು, ಬಿಜೆಪಿ ನಾಯಕ ಕಟೀಲ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಮಕ್ಕಳಾಗದ ಕಾರಣ ರಾಹುಲ್ ಗಾಂಧಿ ಮದುವೆಯಾಗುತ್ತಿಲ್ಲ’ ಎಂದು ಬಿಜೆಪಿ ಸಂಸದ ಕಟೀಲ್ ಹೇಳಿಕೆ ನೀಡಿದ್ದಾರೆ. ಇದು ಅತ್ಯಂತ ಕೆಳಮಟ್ಟದ್ದು ಮತ್ತು ತರ್ಕವಿಲ್ಲದ ದೋಷಪೂರಿತ ಹೇಳಿಕೆ. ರಾಹುಲ್‌ ಗಾಂಧಿ ಅವರು ‘ಪುರುಷನಿಗಿಂತ ಕಡಿಮೆ’ ಎಂದು ಬಿಂಬಿಸುವ ಪುರುಷ ಪ್ರಧಾನವಾದ ಈ ರೀತಿಯ ಪ್ರಚೋದನೆಯು ಅನುಚಿತವಾದದ್ದು ಎಂದು’ ಅವರು ಪ್ರತಿಪಾದಿಸಿದ್ದಾರೆ.

ಕಟೀಲ್‌ಗೆ ಪ್ರಶ್ನೆಯೊಂದನ್ನು ಎಸೆದಿರುವ ಚೇತನ್‌, ‘ಮಕ್ಕಳನ್ನು ಹೊಂದಲೆಂದೇ ಮದುವೆಯಾಗಬೇಕೆ?’ ಎಂದು ಕೇಳಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ