ಶಿವಮೊಗ್ಗ : ‘ನಮ್ಮ ತಂದೆ (ಬಿ.ಎಸ್.ಯಡಿಯೂರಪ್ಪ) ಜೈಲಿಗೆ ಹೋಗಿದ್ದು ಕರಾಳ ದಿನಗಳು.
ಅವರ ಕುರ್ಚಿ ಅಲ್ಲಾಡಿಸಲು ಎಂತಹ ಕೃತ್ಯಗಳು ಮಾಡಿದ್ದರು ಎಂಬುದನ್ನು ಅವರು ಜೈಲಿನಲ್ಲಿದ್ದಾಗ ಡೈರಿ ಬರೆದಿಟ್ಟಿದ್ದಾರೆ. ಸಂದರ್ಭ ಬಂದಾಗ ಬಹಿರಂಗಪಡಿಸಲಾಗುವುದು’ ಎಂದು ಬಿ.ಎಸ್.ಯಡಿಯೂರಪ್ಪ ಅವರ ಪುತ್ರಿ ಬಿ.ವೈ.ಅರುಣಾದೇವಿ ಹೇಳಿದರು.
ಯಡಿಯೂರಪ್ಪ ಅವರ 80ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆ ಸಂದರ್ಭದಲ್ಲಿ ಅದೊಂದು ರಾಜಕೀಯ ಅಸಹ್ಯ ಅನ್ನಿಸಿತ್ತು. ಡೈರಿಯಲ್ಲಿ ಪ್ರತಿಯೊಂದು ಘಟನೆಯನ್ನು ಉಲ್ಲೇಖಿಸಿದ್ದಾರೆ. ತಮ್ಮ ವಿರುದ್ಧ ನಡೆದ ರಾಜಕೀಯ ಷಡ್ಯಂತ್ರದ ನೋವು ಮರೆಯಲು ಹೊನ್ನಾಳಿ ಬಳಿ ಒಂದು ಎಕರೆ ಜಾಗ ತೆಗೆದುಕೊಂಡು ಗದ್ದೆ ಮಾಡಿದ್ದರು. ನೇಗಿಲು ಹಿಡಿದು ತಾವೇ ಹೊಲದಲ್ಲಿ ಕೆಲಸ ಮಾಡಿ ಕೃಷಿ ಮಾಡಿದ್ದಾರೆ’ ಎಂದರು.
‘ಪ್ರತಿ ಶಿವರಾತ್ರಿ ದಿನ ನಮ್ಮ ತಾಯಿ ಮೈತ್ರಾದೇವಿ ಅವರನ್ನು ನೆನೆದು ಯಡಿಯೂರಪ್ಪ ಕಣ್ಣೀರು ಹಾಕುತ್ತಾರೆ’ ಎಂದು ಹೇಳಿದರು.
Laxmi News 24×7