ನಿರ್ದೇಶಕ ಸಿಂಪಲ್ ಸುನಿ ಜೊತೆಯಲ್ಲಿ ವಿನಯ್ ರಾಜ್ ಕುಮಾರ್ ಅವರ ಮುಂಬರುವ ಚಿತ್ರದ ಮೊದಲ ಶೆಡ್ಯೂಲ್ ಇತ್ತೀಚೆಗಷ್ಟೇ ಮುಗಿದಿದೆ.
ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾದ ಭಾಗವಾಗಿದ್ದ ನಟಿ ಸ್ವಾದಿಷ್ಟ ಕೃಷ್ಣನ್ ಅವರು ಈಗಾಗಲೇ ಈ ಯೋಜನೆಯ ಭಾಗವಾಗಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಜೊತೆಯಲ್ಲಿ ವಿನಯ್ ರಾಜ್ ಕುಮಾರ್ ಅವರ ಮುಂಬರುವ ಚಿತ್ರದ ಮೊದಲ ಶೆಡ್ಯೂಲ್ ಇತ್ತೀಚೆಗಷ್ಟೇ ಮುಗಿದಿದೆ.
ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾದ ಭಾಗವಾಗಿದ್ದ ನಟಿ ಸ್ವಾದಿಷ್ಟ ಕೃಷ್ಣನ್ ಅವರು ಈಗಾಗಲೇ ಈ ಯೋಜನೆಯ ಭಾಗವಾಗಿದ್ದಾರೆ. ಇತ್ತೀಚಿನ ವಿಚಾರವೆಂದರೆ ನಟಿ ಮಲ್ಲಿಕಾ ಸಿಂಗ್ ಅವರನ್ನು ಚಿತ್ರಕ್ಕೆ ಕರೆತರಲು ನಿರ್ಧರಿಸಲಾಗಿದೆ.
ಸ್ವಾದಿಷ್ಟ ಅವರು ಜರ್ನಲಿಸ್ಟ್ ಆಗಿ ಕಾಣಿಸಿಕೊಂಡರೆ, ಮಲ್ಲಿಕಾ ಕಾಶ್ಮೀರಿ ಹುಡುಗಿಯ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಕನ್ನಡದಲ್ಲಿ ಡಬ್ಬಿಂಗ್ ಆವೃತ್ತಿಯನ್ನು ಹೊಂದಿದ್ದ ಜನಪ್ರಿಯ ಹಿಂದಿ ಧಾರಾವಾಹಿ ‘ರಾಧಾಕೃಷ್ಣ’ ಖ್ಯಾತಿಯ ಮಲ್ಲಿಕಾ ಗಲ್ಲಿ ಬಾಯ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ಕನ್ನಡದಲ್ಲಿ ಇದು ಅವರ ಮೊದಲ ಸಿನಿಮಾ ಆಗಲಿದೆ.ಚಿತ್ರಕ್ಕೆ ಮೈಸೂರು ರಮೇಶ್ ಅವರು ಬಂಡವಾಳ ಹೂಡಿದ್ದು, ಮಲ್ಲಿಕಾ ಸಿಂಗ್ ಅವರ ಪಾತ್ರದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.