Breaking News

ರಾಜ್ಯದ `SSLC-PUC’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಈ ವರ್ಷವೂ ಸಿಗಲಿದೆ ಕೃಪಾಂಕ!

Spread the love

ಬೆಂಗಳೂರು : ಎಸ್ ಎಸ್‌ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಈ ವರ್ಷವೂ 10, 12 ನೇ ತರಗತಿ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲು ನಿರ್ಧರಿಸಲಾಗಿದೆ.

ಕೊರೊನಾ ಕಾರಣದಿಂದ ಕಲಿಕೆ ಮೇಲೆ ಉಂಟಾಗಿರುವ ಪರಿಣಾಮದಿಂದ ಇನ್ನೂ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಚೇತರಿಸಿಕೊಳ್ಳದ ಕಾರಣ ಈ ವರ್ಷವೂ ಒಟ್ಟಾರೆ ಕನಿಷ್ಟ ಅಂಕ ಗಳಿಸುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶೇ.

10, ಪಿಯುಸಿ ವಿದ್ಯಾರ್ಥಿಗಳಿಗೆ ಶೇ. 5 ಕೃಪಾಂಕ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ಎಸ್ ಎಸ್ ಎಲ್ ಸಿಯಲ್ಲಿ 6 ವಿಷಯಗಳ ಪೈಕಿ 3 ರಲ್ಲಿ ಉತ್ತೀರ್ಣರಾಗಿದ್ದರೆ, ಉಳಿದ 3 ವಿಷಯಗಳಲ್ಲಿ ಗರಿಷ್ಠ 26 ಅಂಕಗಳು ದೊರೆಯಲಿವೆ. ಪಿಯುಸಿಯಲ್ಲಿ ಕನಿಷ್ಟ 210 ಅಂಕ ಪಡೆದವರಿಗೆ 2 ವಿಷಯಗಳಲ್ಲಿ ಶೇ. 5 ರಂತೆ ಅಂದರೆ ತಲಾ 5 ಅಂಕ ಸೇರಿ ಗರಿಷ್ಠ 10 ಅಂಕ ಪಡೆಯಲಿದ್ದಾರೆ.

`SSLC’ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ

ಮಾರ್ಚ್ 31- ಪ್ರಥಮ ಭಾಷೆ,

ಏಪ್ರಿಲ್ 3- ಗಣಿತ,

ಏಪ್ರಿಲ್ 6- ದ್ವಿತೀಯ ಭಾಷೆ

ಏಪ್ರಿಲ್ 10- ವಿಜ್ಞಾನ,

ಏಪ್ರಿಲ್ 12- ತೃತೀಯ ಭಾಷೆ

ಏಪ್ರಿಲ್ 15- ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ

* ದಿನಾಂಕ 09-03-2023, ಗುರುವಾರ – ಕನ್ನಡ, ಅರೇಬಿಕ್

*ದಿನಾಂಕ 11-03-2023, ಶನಿವಾರ – ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ

*ದಿನಾಂಕ 13-03-2023, ಸೋಮವಾರ – ಅರ್ಥಶಾಸ್ತ್ರ

*ದಿನಾಂಕ 14-03-2023, ಮಂಗಳವಾರ – ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ

*ದಿನಾಂಕ 15-03-2023, ಬುಧವಾರ – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

*ದಿನಾಂಕ 16-03-2023, ಗುರುವಾರ – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

*ದಿನಾಂಕ 17-03-2023, ಶುಕ್ರವಾರ – ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್

*ದಿನಾಂಕ 18-03-2023, ಶನಿವಾರ – ಭೂಗೋಶಶಾಸ್ತ್ರ, ಜೀವಶಾಸ್ತ್ರ

*ದಿನಾಂಕ 20-03-2023, ಸೋಮವಾರ – ಇತಿಹಾಸ, ಭೌತಶಾಸ್ತ್ರ

*ದಿನಾಂಕ 21-03-2023, ಮಂಗಳವಾರ – ಹಿಂದಿ

*ದಿನಾಂಕ 23-03-2023, ಗುರುವಾರ – ಇಂಗ್ಲೀಷ್

*ದಿನಾಂಕ 25-03-2023 ಶನಿವಾರ – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

*ದಿನಾಂಕ 27-03-2023, ಸೋಮವಾರ – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ

*ದಿನಾಂಕ 29-03-2023, ಬುಧವಾರ – ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ