Breaking News

ಇನ್ನೊಂದು ತಿಂಗಳಲ್ಲಿ ಬಿಜೆಪಿ ಅಂಗಡಿ ಬಂದ್ ಆಗಲಿದೆ :ಎಂ. ಬಿ. ಪಾಟೀಲ

Spread the love

ವಿಜಯಪುರ: ಇನ್ನೊಂದು ತಿಂಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಬಿಜೆಪಿ ಅಂಗಡಿ ಬಂದ್ ಆಗಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಇಲ್ಲಿನ ಶಾಸಕರು ಮೊದಲು ದೇವರ ಹಿಪ್ಪರಗಿಯಲ್ಲಿ ಇದ್ದರು.

ಇಲ್ಲಿಗೆ ಗುಳೆ ಬಂದಿದ್ದಾ. ಮುಂದೆ ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ. ರಾಜಕಾರಣದಲ್ಲಿ ರಾಜಕೀಯವಾಗಿ ರಾಜಕಾರಣ ಮಾಡೋಣ. ಅವರದ್ದು ಒಂದು ಪಕ್ಷ, ನಮ್ಮದು ಒಂದು ಪಕ್ಷ ಇರುತ್ತದೆ. ಆದರೆ, ಪೊಲೀಸರನ್ನು ಬಿಟ್ಟು ದಬ್ಬಾಳಿಕೆ‌ ಮಾಡಿಸುವುದು ನಡೆಯುವುದಿಲ್ಲ. ಇನ್ನೊಂದು ತಿಂಗಳಲ್ಲಿ‌ ನೀತಿ ಸಂಹಿತೆ ಬರುತ್ತದೆ, ಬಿಜೆಪಿ ಅಂಗಡಿ ಬಂದ್ ಆಗುತ್ತದೆ. ಇಲ್ಲಿ ಸೇರಿದವರು ಒಂದೊಂದು ಓಟ್ ಹಾಕಿ ಎರಡೆರಡು ಓಟ್ ಹಾಕಿಸಿದರೆ ಸಾಕು ನಾಡಗೌಡರು ಗೆದ್ದು ಬರುತ್ತಾರೆ ಎಂದು ಹೇಳಿದರು.

ಪೀರಾಪುರ-ಬೂದಿಹಾಳ ನೀರಾವರಿ ಯೋಜನೆ ಮಾಡಿದ್ದು ನಾವು, ಅದಕ್ಕೆ ಬೊಮ್ಮಾಯಿ ಬಂದು ಅಡಿಗಲ್ಲು ಹಾಕುತ್ತಾರೆ. ನಾವು ಮಾಡಿದ ಕೆಲಸಗಳಿಗೆ ಬಿಜೆಪಿಯವರು ಬಂದು ಪೂಜೆ ಮಾಡುತ್ತಾರೆ. ಈಗ ಗಾಳಿ ಬೀಸಿದೆ, ನಾಡಗೌಡರಯ ಇದರಲ್ಲಿ ಕಡ್ಯಾಕ ಆಗುತ್ತಾರೆ. ಇಷ್ಟೊಂದು ಜನ ಬಂದಿದ್ದು ನೋಡಿದರೆ ಬದಲಾವಣೆ ಬಯಸಿದ್ದೀರಿ ಎಂಬುದು ವಿಶ್ವಾಸ ಇದೆ ಎಂದು ಅವರು ಹೇಳಿದರು.

ಇಲ್ಲಿಯ ಜನಸ್ತೋಮ‌ ನೋಡಿದರೆ ಕಾಂಗ್ರೆಸ್ ಗೆಲುವು ಪಕ್ಕಾ ಆಗಿದೆ. ಸಿದ್ದರಾಮಯ್ಯ ಸಾಹೇಬರು ಅನ್ನಭಾಗ್ಯ, ಶೂ ಭಾಗ್ಯ ಸೇರಿದಂತೆ ಕೊಟ್ಟ ಭಾಗ್ಯಗಳು ಜನರ ಮನದಲ್ಲಿವೆ. ಭ್ರಷ್ಟಾಚಾರ ಬಿಜೆಪಿಯಲ್ಲಿ 40 % ಇದೆ, ಈಗ 50% ಆಗಿದೆ, ಚುನಾವಣೆ ಬಂದಾಗ 60-70 ಆಗುತ್ತದೆ. ಗ್ಯಾಸ್, ಪೆಟ್ರೋಲ್, ಎಣ್ಣೆ ಎಲ್ಲಾ ಬೆಲೆ ಜಾಸ್ತಿ ಆಗಿವೆ. ಮೋದಿಯವರ ಅಚ್ಚೆದಿನ್ ಬರಲಿಲ್ಲಾ, ಜನರು ತತ್ತರಿಸಿದ್ದಾರೆ. ನೋಟಬುಕ್, ಪೆನ್ ಮೇಲೂ ಜಿ ಎಸ್ ಟಿ ಹಾಕಿದ್ದಾರೆ. ಉದ್ಯೋಗ ಸಿಕ್ಕಿಲ್ಲ, ರೈತರಿಗೆ ಅನುಕೂಲ ಆಗಿಲ್ಲ. ಮುದ್ದೇಬಿಹಾಳ ಕ್ಷೇತ್ರದ ಪಡೇಕನೂರ ಕರೆ ತುಂಬಿದ್ದರಿಂದ ಐದು ಹಳ್ಳಿ ಸೇರಿ ನೂರು ಕೋಟಿ ರೂಪಾಯಿ ಕಬ್ಬನ್ನು ರೈತರು ಬೆಳೆಯುವಂತಾಗಿದೆ ಎಂದು ಹೇಳಿದರು.


Spread the love

About Laxminews 24x7

Check Also

ಬರೀ ಜಾತ್ರಿಗೆ ಬಂದ್ ಹೋಗಬ್ಯಾಡ್ರಿ ನಮ್ಗೊಂದ್ ಕನ್ಯೆ ನೋಡಿ

Spread the loveವಿಜಯಪುರ, ಏಪ್ರಿಲ್​ 23: ಜಾತ್ರೆಯೆಂದರೆ ಅಲ್ಲಿ ಸಡಗರ ಸಂಭ್ರಮ ಮನೆ ಮಾಡಿರುತ್ತದೆ. ಇಡೀ ಊರ ತುಂಬೆಲ್ಲಾ ಜನರು ಸೇರಿರುತ್ತಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ