ಬೆಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಸೇರಿದಂತೆ 7 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರನ್ನು ಡಿಐಜಿ ರೈಲ್ವೆ ಹುದ್ದೆಗೆ ನಿಯೋಜಿಸಿದ ಸರ್ಕಾರ, ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಹಿರಿಯ ಎಸ್‌ಪಿ ಕುಲದೀಪ್ ಕುಮಾರ್ ಜೈನ್ ಅವರನ್ನು ನೇಮಿಸಿದೆ.
ಬೆಂಗಳೂರು ನಗರಕ್ಕೆ ಹೊಸದಾಗಿ ದಕ್ಷಿಣ (ಸಂಚಾರ) ವಿಭಾಗವನ್ನು ಸೃಜಿಸಿ ಮಹಮ್ಮದ್ ಸುಜೀತಾ ನೇಮಕ ಮಾಡಿದೆ. ಉಳಿದಂತೆ ದೆಕ್ಕಾ ಕಿಶೋರ್ ಬಾಬು- ಎಸ್‌ಪಿ ರಾಜ್ಯ ಗುಪ್ತದಳ, ಡಾ. ಕೋನಾ ವಂಶಿಕೃಷ್ಣ- ಎಸ್‌ಪಿ ವೈರ್‌ಲೆಸ್, ಮಹಮ್ಮದ್ ಸುಜೀತಾ – ಡಿಸಿಪಿ ದಕ್ಷಿಣ ವಿಭಾಗ ಸಂಚಾರ ಬೆಂಗಳೂರು, ಅರುಣಾಗ್ಷು ಗಿರಿ- ಡಿಸಿಪಿ ಸಿಎಆರ್ (ಕೇಂದ್ರ) ಬೆಂಗಳೂರು, ಯಶೋಧ ವಂಟಗೋಡಿ- ಎಸ್‌ಪಿ ಕೊಪ್ಪಳಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Laxmi News 24×7