Breaking News

ಹ್ಯಾಪಿ ಎಂಡಿಂಗ್ʼ ಬೇಕು ಅಂತ ಯುವತಿ ಮೇಲೆ ʼಅತ್ಯಾಚಾʼರವೆಸಗಿದ ಕಾಮುಕ..!

Spread the love

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಸಾಜ್ ಪಾರ್ಲರ್‌ಗಳ ಹಾವಳಿ ಹೆಚ್ಚಾಗಿದೆ. ಸಾವಿರಾರು ಪಾರ್ಲರ್ ಗಳು ತಲೆ ಎತ್ತಿವೆ. ಇಂತಹ ಪಾರ್ಲರ್ ಗಳಲ್ಲಿ ‌ಕೆಲಸ ಮಾಡುವ ಯುವತಿಯರು ಎಷ್ಟರ ಮಟ್ಟಿಗೆ‌ ಸೇಫ್ ಅನ್ನೋದೆ ಈಗಿನ ಪ್ರಶ್ನೆಯಾಗಿದೆ. ಜಯನಗರ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿನ ಮ್ಯಾಜಿಕ್ ಟೆಚ್ ಯೂನಿಸೆಕ್ಸ್ ಸೆಲೂನ್ ಪಾರ್ಲರ್ ಒಂದರಲ್ಲಿ ಇದೀಗ ಅತ್ಯಾಚಾರದ ಆರೋಪವೊಂದು ಕೇಳಿ ಬಂದಿದೆ.‌ಕಾಮಕ ರವೀಂದ್ರ ಶೆಟ್ಟಿ ಎಂಬಾತ ಯುವತಿಯ ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾನೆ.

 

ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುವಯುವತಿ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾನೆ.‌ ಕಾಮುಕ ರವೀಂದ್ರ ಶೆಟ್ಟಿಯ ಸಂಭಂದಿ ರತ್ನಾವತಿ ಮತ್ತು ಜಗದೀಶ್ ಎಂಬುವವರಿಗೆ ಸೇರಿದ ಸಲೂನ್ ಎನ್ನಲಾಗಿದೆ. ಈತ ಪದೇ ಪದೇ ಪಾರ್ಲರ್‌ಗೆ ಬಂದು ಮಸಾಜ್ ಮಾಡಿಸಿಕೊಳ್ಳುತ್ತಿದ್ದ. ಅಲ್ಲದೇ ಮಸಾಜ್‌ ನನಗೆ ಸಾಕಾಗೋದಿಲ್ಲ ಹ್ಯಾಪಿ ಎಂಡಿಂಗ್ ಬೇಕು ಅಂತಿದ್ದ.‌

 

ಹೀಗೆ ಇದೇ‌ ತಿಂಗಳ 14 ನೇ ತಾರೀಖಿನಂದು ಮತ್ತೆ ಮಸಾಜ್ ಪಾರ್ಲರ್ ಗೆ ಬಂದ ಈತ ಯುವತಿಯನ್ನು ಬಲವಂತವಾಗಿ ರೂಂ ಒಳಗಡೆ ಎಳೆದೊಯ್ದು ಆಕೆಯ ಬಟ್ಟೆ, ಒಳ ಉಡುಪುಗಳನ್ನು ಬಲವಂತವಾಗಿ ಬಿಚ್ಚಿ ಕ್ರೌರ್ಯ ಮೆರಿದಿದ್ಜಾನೆ. ತನ್ನ ಪ್ರೈವೇಟ್ ಪಾರ್ಟ್ಸ್ ಗಳನ್ನು ಯುವತಿಗೆ ಬಲವಂತವಾಗಿ ಮುಟ್ಟಲು ಹೇಳಿದ್ದಾನೆ‌ ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಾಳೆ.

ಸದ್ಯ ನೊಂದ ಯುವತಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.‌ ಇನ್ನೂ ಯುವತಿಯ ಜಾತಿ ವಿಚಾರವಾಗಿಯೂ ಸಹ ಕಾಮುಕ ರವೀಂದ್ರ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ಯುವತಿ ದೂರಿದ್ದು ಅಟ್ರಾಸಿಟಿ ಕೇಸ್ ಸಹ ದಾಖಲು ಮಾಡಲಾಗಿದೆ. ದೂರಿನನ್ವಯ ಪೊಲೀಸರು ಆರೋಪಿ ರವೀಂದ್ರ ಶೆಟ್ಟಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ