ಕೆಲವು ದಿನಗಳ ಹಿಂದೆ ರಕ್ತದಾನ ಶಿಬಿರದಲ್ಲಿ ಬಿಜೆಪಿಯ ಶಾಸಕರು, ಸಂಸದರೊಂದಿಗೆ ವೇದಿಕೆ ಹಂಚಿಕೊಂಡು ಸುದ್ದಿಯಾಗಿದ್ದ ನಗರದ ಕುಖ್ಯಾತ ರೌಡಿ ಶೀಟರ್ ಸೈಲೆಂಟ್ ಸುನೀಲ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ದೇವಾಲಯಗಳಲ್ಲಿ ಭಕ್ತರಿಗೆ ಸೈಲೆಂಟ್ ಸುನಿಲನ ಕಡೆಯಿಂದ ಲಡ್ಡು ವಿತರಣೆ ಜೋರಾಗಿ ನಡೆದಿದೆ.
ಸದ್ಯ ರೌಡಿಸಂ ಬಿಟ್ಟಿರುವುದಾಗಿ ಹೇಳುತ್ತಲೇ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವ ಸೈಲೆಂಟ್ ಸುನೀಲ ಭಕ್ತರಿಗೆ ಲಡ್ಡು ಪ್ರಸಾದ ಹಂಚಿದ್ದಾನೆ. ಲಡ್ಡು ಪ್ರಸಾದದ ಕವರ್ ಮೇಲೆ ಸೈಲೆಂಟ್ ಸುನೀಲನ ಫೋಟೋ ಜತೆ ಸಮಾಜ ಸೇವಕರು ಎಂಬ ಅಡಿಬರಹ ರಾರಾಜಿಸಿವೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Laxmi News 24×7