Breaking News

ಪತ್ನಿ ಅನುಮಾನಕ್ಕೆ ಶಿಕ್ಷಕ ಮಹಾಶಯನೊಬ್ಬ ಆಕೆಯನ್ನೇ ಕೊಲೆಗೈದಿ

Spread the love

ಕಲಬುರ್ಗಿ: ಮನುಷ್ಯನಿಗೆ ಅನುಮಾನ ಎನ್ನುವುದು ಶುರುವಾದರೆ ಎಂಥಹ ಕೃತ್ಯವೆಸಗಲೂ ಹಿಂದೆಮುಂದೆ ನೋಡಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ. ಪತ್ನಿ ಮೇಲಿನ ಅನುಮಾನಕ್ಕೆ ಶಿಕ್ಷಕ ಮಹಾಶಯನೊಬ್ಬ ಆಕೆಯನ್ನೇ ಕೊಲೆಗೈದಿರುವ ಘಟನೆ ಕಲಬುರ್ಗಿಯ ಅಂಬಿಕಾ ನಗರದಲ್ಲಿ ನಡೆದಿದೆ.

ಫರಿದಾ ಬೇಗಂ ಪತಿಯಿಂದ ಕೊಲೆಯಾದ ಮಹಿಳೆ. ಏಜಾಜ್ ಅಹ್ಮದ್ ಹಾಗೂ ಫರೀದಾ ಬೇಗಂ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಅಲ್ಲದೇ ಪತಿ-ಪತ್ನಿ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರು. ಪತ್ನಿ ಮೇಲಿನ ಅನುಮಾನದಿಂದ ಏಜಾಜ್ ಕಿರುಕುಳ ಕೊಡುತ್ತಿದ್ದ, ಆಕೆ ಶಾಲೆಗೆ ಹೋಗಲು ತಡೆಯೊಡ್ದುತ್ತಿದ್ದ.

ಅನುಮಾನ ವಿಪರೀತಕ್ಕೆ ಹೋಗಿ ಕೊಲೆಯಲಿ ಅಂತ್ಯವಾಗಿದೆ. ಏಜಾಜ್ ಪತ್ನಿ ಫರಿದಾ ಶೀಲ ಶಂಕಿಸಿ, ಆಕೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾನೆ. ರಾತ್ರಿ ಮಲಗಿದ್ದ ವೇಳೆ ಏಜಾಜ್ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.

ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ 2:1ರ ಅನುಪಾತ: ಗೆಜೆಟ್ ಅಧಿಸೂಚನೆ ಪ್ರಕಟ

Spread the loveಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿಗೆ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಿ ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಅದರಂತೆ, ಪ್ರಾಥಮಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ