ಮೈಸೂರು: ಆರ್.ಟಿ.ನಗರದಲ್ಲಿ ಮಂಗಳೂರಿನ ದೈವಗಳು ಗುಡಿಗಳು ತಲೆ ಎತ್ತಿದ್ದು, ಜನರ ನಂಬಿಕೆಯಾದ ಕೊರಗಜ್ಜ ದೈವದ ಹೆಸರಿನಲ್ಲಿ ದಂಧೆ ನಡೆಯುತ್ತಿದ್ದೆಯಾ ಎಂಬ ಅನುಮಾನ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಲಕ್ಷಾಂತರ ರೂಪಾಯಿ ಆದಾಯ ಬರುತ್ತಿರುವ ಕೊರಗಜ್ಜನ ದೈವಸ್ಥಾನದ ಪಕ್ಕದಲ್ಲಿಯೇ, ಇದೀಗ ದೈವ ರಾಜ ಗುಳಿಗ ಹೆಸರಿನಲ್ಲಿ ಮತ್ತೊಂದು ದೈವಸ್ಥಾನ ನಿರ್ಮಾಣವಾಗಿದೆ.
ಇದಲ್ಲದೆ ದೈವಸ್ಥಾನದ ಟ್ರಸ್ಟ್ ಸದಸ್ಯರಲ್ಲಿಯೇ ಹಣಕ್ಕಾಗಿ ಕಿತ್ತಾಟ ಆರಂಭವಾಗಿದ್ದು, ದೈವಸ್ಥಾನದ ಅರ್ಚಕ ಹುಂಡಿಯನ್ನು ತನ್ನ ಮನೆಗೆ ಕೊಂಡೊಯ್ದಿರುವ ಘಟನೆ ನಡೆದಿದೆ. ಅಲ್ಲದೆ, ದೈವಸ್ಥಾನದ ಅರ್ಚಕ ಹಾಗೂ ಟ್ರಸ್ಟ್ ಅಧ್ಯಕ್ಷನ ನಡುವೆ ಕಿತ್ತಾಟ ನಡೆದಿದ್ದು, ಅರ್ಚಕ ತೇಜುಕುಮಾರ್ಗೆ ಅಧ್ಯಕ್ಷ ಬಂಗಾರಪ್ಪ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.
ಸದ್ಯ ಅರ್ಚಕ ಮತ್ತು ಟ್ರಸ್ಟ್ನ ಅಧ್ಯಕ್ಷನ ನಡುವಿನ ಗಲಾಟೆಯಿಂದ ಬೇಸತ್ತ ಅರ್ಚಕನ ಪತ್ನಿ ಆತ್ಮಹತ್ಯೆಗೆ ಯತ್ನಿಸಿ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯವಾದ ವಿಚಾರವೆಂದರೆ ದೈವಸ್ಥಾನದ ಹಣಕ್ಕಾಗಿ ಕಿತ್ತಾಡಿಕೊಂಡಿರುವ ಇವರೆಲ್ಲರೂ ಸಂಬಂಧಿಕರೇ. ಇಷ್ಟಾಗಿಯೂ ಘಟನೆಯ ಸಂಬಂಧ ಈವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.
Laxmi News 24×7