ಶಿವಮೊಗ್ಗ: ‘ಮುಂದಿನ 10 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಸ್ಕ್ರೀನಿಂಗ್ ಕಮಿಟಿಯ ಹಲವು ಸಭೆಗಳಿವೆ. ಆ ಕಾರ್ಯ ಮುಗಿದ ನಂತರ ನಿರ್ಧರಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸ್ಕ್ರೀನಿಂಗ್ ಕಮಿಟಿಯ ಹಲವು ಸಭೆಗಳಿವೆ. ಆ ಕಾರ್ಯ ಮುಗಿದ ನಂತರ ನಿರ್ಧರಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಅಭ್ಯರ್ಥಿಯ ಪಟ್ಟಿ ಬಿಡುಗಡೆ ವಿಚಾರವಾಗಿ ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ ಹೊಂದಾಣಿಕೆಯಿಂದ ಇದ್ದಾರೆ. ಇಬ್ಬರೂ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರು’ ಎಂದರು.
‘ಡಿ.ಕೆ.ಶಿವಕುಮಾರ್ ಅವರಿಗೆ ಜೆಡಿಎಸ್ ಪಕ್ಷ ವಿಸರ್ಜನೆ ಮುಖ್ಯ’ ಎನ್ನುವ ಎಚ್.ಡಿ.ಕುಮಾರ್‌ಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ‘ನಾನೆಂದೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪಕ್ಷ ವಿಸರ್ಜನೆ ಮಾಡಿ ಎಂದು ಹೇಳಿಲ್ಲ. ಜೆಡಿಎಸ್ ಗೆಲ್ಲಲಿಲ್ಲ ಎಂದರೆ ನಾನೇ ರಾಜೀನಾಮೆ ನೀಡುವುದಾಗಿ ಅವರು ಹೇಳಿದ್ದರು. ರಾಜಕೀಯದಲ್ಲಿ ಒಂದು ಅಥವಾ ಎರಡು ಪಕ್ಷ ಇದ್ದರೆ ಪೈಪೋಟಿ ನೀಡಲು ಸಾಧಾರಣ ಎನಿಸುತ್ತದೆ. ಅದಕ್ಕಾಗಿ ಅವರು ಪಕ್ಷ ವಿಸರ್ಜನೆ ಮಾಡುವುದು ಬೇಡ. ಪಾಪ, ಅವರದ್ದೂ ಒಂದು ಪಕ್ಷ ಇರಲಿ ಬಿಡಿ’ ಎಂದು ಲೇವಡಿ ಮಾಡಿದರು.