ರೈತನ ಮಗನಾಗಿದ್ದುಕೊಂಡು ಕೊತ್ವಾಲ್ ಶಿಷ್ಯನಾದ ಡಿ.ಕೆ ಶಿವಕುಮಾರ್, ಭಾರಿ ಪ್ರಮಾಣದ ಆಸ್ತಿ ಸಂಪಾದಿಸಿದ್ದು ಹೇಗೆ ಎಂಬುದು ಕನಕಪುರದ ಪ್ರತಿ ಬಂಡೆ ಬಂಡೆಗೂ ತಿಳಿದಿದೆ. ಬೆಂಗಳೂರು: ರೈತನ ಮಗನಾಗಿದ್ದುಕೊಂಡು ಕೊತ್ವಾಲ್ ಶಿಷ್ಯನಾದ ಡಿ.ಕೆ ಶಿವಕುಮಾರ್, ಭಾರಿ ಪ್ರಮಾಣದ ಆಸ್ತಿ ಸಂಪಾದಿಸಿದ್ದು ಹೇಗೆ ಎಂಬುದು ಕನಕಪುರದ ಪ್ರತಿ ಬಂಡೆ ಬಂಡೆಗೂ ತಿಳಿದಿದೆ.
ಆದರೆ ಆ ಬಗ್ಗೆ ಜಾರಿ ನಿರ್ದೇಶನಾಲಯ ತಿಳಿಯಲು ಹೊರಟಾಗ ಮಾತ್ರ ಅವರಿಗೆ ಆತಂಕ ಉಂಟಾಗುತ್ತದೆ ಎಂದು ಬಿಜೆಪಿ ಹೇಳಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ತಾವು ಪ್ರಜಾದ್ರೋಹ ಯಾತ್ರೆ ಮಾಡಬೇಕೋ ಅಥವಾ ವಿಚಾರಣೆ ಎದುರಿಸಬೇಕೋ ಎಂಬುದನ್ನು ಡಿ.ಕೆ ಶಿವಕುಮಾರ್ ಅವರೇ ನಿರ್ಧರಿಸಬೇಕು.
ಯಾತ್ರೆ ಹೆಸರಲ್ಲಿ ಹಿಂದೆ ಮಾಡಿದ ಪ್ರಜಾದ್ರೋಹದ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನವನ್ನು ಅವರು ಮಾಡಬಾರದು ಎಂದು ಲೇವಡಿ ಮಾಡಿದೆ. ಈಗ ವಿಚಾರಣೆ ಬಗ್ಗೆ ನೀವು ಕಿಡಿಕಾರುತ್ತಿದ್ದೀರಿ.
ಆದರೆ, ಅಕ್ರಮ ಎಸೆಗುವಾಗ ಜೀವಮಾನ ಪೂರ್ತಿ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ ಎಂಬ ಭ್ರಮೆಯೇ ನಿಮ್ಮ ಈಗಿನ ಪರಿಸ್ಥಿತಿಗೆ ಕಾರಣ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಮ್ಮ ವಿರುದ್ಧ ಟೀಕೆ ನಿಲ್ಲಿಸಿ ಎಂದು ಬಿಜೆಪಿ ಸಲಹೆ ನೀಡಿದೆ.