ಮುಗಳಖೋಡ: ಸಮೀಪದ ಕಟಕಬಾವಿ ಗ್ರಾಮದ ಪಿಡಾಯಿ ತೋಟದಲ್ಲಿ 4ನೇ ವರ್ಷದ
ಜಕ್ಕಮ್ಮದೇವಿ ಹಾಗೂ ಧರಿದೇವರ ಪುಣ್ಯಾಶ್ರಮದ ವೇದಾಂತ ಪರಿಷತ್ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ಫೆ. 9ರಿಂದ 13ರವರೆಗೆ ನಡೆಯಲಿದೆ.
ಅಭಿನವ ಧರೇಶ್ವರ ಸ್ವಾಮೀಜಿ ಜಕ್ಕಮ್ಮದೇವಿ ಹಾಗೂ ಧರಿದೇವರ ಪುಣ್ಯಾಶ್ರಮ ಕಟಕಬಾವಿ ಅವರ ಸಾನ್ನಿಧ್ಯದಲ್ಲಿ ಸರ್ವ ಕಾರ್ಯಕ್ರಮಗಳು ಜರುಗುವವು.
9ರಂದು ಬೆಳಿಗ್ಗೆ 7 ಗಂಟೆಗೆ ಧ್ವಜಾರೋಹಣ, ಅದೇ ದಿನ ಪಲ್ಲಕ್ಕಿಗಳು ಸುಕ್ಷೇತ್ರ ರಾಮನಕಟ್ಟಿಗೆ ಸ್ನಾನಕ್ಕೆ ಹೋಗುತ್ತವೆ. ಅದೇ ದಿನ ಸಂಜೆ 6 ಗಂಟೆಗೆ ಮಹಾತ್ಮರಿಂದ ಪ್ರವಚನ ಕಾರ್ಯಕ್ರಮ ಜರುಗುವುದು.
ಶುಕ್ರವಾರ 10ರಂದು ಅಭಿನವ ಧರೇಶ್ವರ ಸ್ವಾಮಿಗಳ ಕಿರೀಟ ಪೂಜಾ ಕಾರ್ಯಕ್ರಮ ಜರುಗುವುದು. ನಂತರ ಮಹಿಳೆಯರ ಉಡಿತುಂಬುವ ಕಾರ್ಯಕ್ರಮ, ಜಂಗಿ ನಿಕಾಲಿ ಕುಸ್ತಿಗಳು, ಟಗರಿನ ಕಾಳಗ, ಸ್ವಾಮಿಗಳ ತುಲಾಭಾರ ಸೇರಿದಂತೆ ಡೊಳ್ಳಿನ ಗಾಯನ ಹಾಗೂ ಸಕಲ ಜನಪದ ಗಾಯನಗಳು ನಡೆಯುವವು.
ಹೆಚ್ಚಿನ ಮಾಹಿತಿಗಾಗಿ 9980032543, 9481105667, 7353149637 ಸಂಪರ್ಕಿಸಬಹುದು.
Laxmi News 24×7