ರಾಮದುರ್ಗ: ಹುಟ್ಟಿರುವ ಪ್ರತಿಯೊಬ್ಬರು ಸಮಾಜಕ್ಕೆ ತಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿಕೊಳ್ಳಬೇಕು. ಉತ್ತಮ ಕೊಡುಗೆ ನೀಡಲು ಯತ್ನಿಸಬೇಕು ಎಂದು ನ್ಯಾಯಾಧೀಶ ವೆಂಕಣ್ಣ ಹೊಸಮನಿ ಹೇಳಿದರು.
ಪಟ್ಟಣದ ಸಿ.ಡಿ. ಹಲ್ಯಾಳ ಪ್ರವಢಶಾಲೆಯ 1990 ರಿಂದ 1993ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಶಾಲೆಯಲ್ಲಿ ಕಲಿತವರು ವಿವಿಧ ಹುದ್ದೆಗಳಿದ್ದಾರೆ. ಈ ಸಮ್ಮಿಲನ ಎಲ್ಲರು ಒಂದೆಡೆ ಸೇರಲು ಮತ್ತು ಶಿಕ್ಷಕರ ಆಶೀರ್ವಾದ ಪಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ವಿದ್ಯೆ ಕಲಿಸಿದ ಆತ್ಮೀಯ ಗುರುಗಳಿಗೆ, ಬೋಧಕೇತರ ಸಿಬ್ಬಂದಿಗೆ ವಿದ್ಯಾರ್ಥಿಗಳು ಪುಷ್ಪವೃಷ್ಟಿ ಮೂಲಕ ವೇದಿಕೆಗೆ ಬರಮಾಡಿಕೊಂಡರು. ವಿ.ಜಿ. ಬಳಿಗೇರಿ, ಎಚ್.ಪಿ. ಶೇಷಪ್ಪನ್ನವರ, ಎಸ್.ಆರ್. ಪುರುಷಾಕಾರಿ ಹಾಗೂ ವಿ.ಡಿ. ಜಂಬಗಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು