Breaking News

ರಾಜ್ಯದ ಗ್ರೀನ್​ಜೋನ್​ಗಳಲ್ಲಿ ಶಾಲೆ ಪುನರಾರಂಭ?; ಸರ್ಕಾರಕ್ಕೆ ತಜ್ಞರ ಸಮಿತಿ ಮಾಡಿದ ಶಿಫಾರಸಿನ ವಿವರ ಇಲ್ಲಿದೆ

Spread the love

ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ ಮಿತಿಮೀರುತ್ತಿದೆ. ಇದರಿಂದಾಗಿ ಹಳ್ಳಿಹಳ್ಳಿಗಳಲ್ಲೂ ಜನರು ಮನೆಯಿಂದ ಹೊರಗೆ ಬರಲು ಆತಂಕ ಪಡುವಂತಾಗಿದೆ. ಈ ಆತಂಕದ ನಡುವೆಯೇ ರಾಜ್ಯ ಸರ್ಕಾರ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಮಾಡಿ ಮುಗಿಸಿದೆ. ಇದೀಗ ಹಸಿರು ವಲಯಗಳಲ್ಲಿ ಮೊದಲು ಶಾಲೆ ಆರಂಭಿಸಿ, ನಂತರ ಕಂಟೋನ್ಮೆಂಟ್​ ವಲಯವನ್ನು ಹೊರತುಪಡಿಸಿ, ಉಳಿದೆಡೆ ಶಾಲೆಗಳನ್ನು ತೆರೆಯಬಹುದು ಎಂದು ತಜ್ಞರ ತಂಡ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ರಾಜ್ಯ ಸರ್ಕಾರ ತಜ್ಞರ ಅಭಿಪ್ರಾಯ ಕೇಳಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿರುವ ಪ್ರೊ. ಎಂ.ಕೆ. ಶ್ರೀಧರ್ ನೇತೃತ್ವದ‌‌ ಸಮಿತಿ, ಯಾವುದೇ ಸೋಂಕಿತರು ಇರದ, ಸುರಕ್ಷಿತ ಸ್ಥಳವೆಂದರೆ ಹಸಿರು ವಲಯ. ಇವುಗಳಲ್ಲಿ ಮೊದಲು ಶಾಲೆಗಳನ್ನು ಆರಂಭಿಸಬಹುದು ಎಂದು ಸಲಹೆ ನೀಡಿದೆ. ಆದರೆ ಈ ವಲಯಗಳು ಪ್ರತಿದಿನ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ಶಾಲೆಗಳನ್ನು ಮುಚ್ಚಿ ಹಲವು ತಿಂಗಳುಗಳೇ ಆಗಿರುವುದರಿಂದ ರಾಜ್ಯ ಸರ್ಕಾರ ಎಲ್ಲೆಡೆಯಿಂದ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ

ಪ್ರೊ. ಎಂ.ಕೆ. ಶ್ರೀಧರ್ ಸಮಿತಿಯ ವರದಿಯಲ್ಲಿನ ಪ್ರಮುಖ‌ ಅಂಶಗಳೆಂದರೆ, ಸಂಪೂರ್ಣ ಆನ್​ಲೈನ್ ಶಿಕ್ಷಣಕ್ಕೆ ಬ್ರೇಕ್ ಹಾಕಬೇಕು. ಆನ್​ಲೈನ್ ಶಿಕ್ಷಣದ ಜೊತೆಗೆ ಆಫ್​ಲೈನ್ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಈಗಾಗಲೇ ಕೇಂದ್ರ ಸರ್ಕಾರದ ಆನ್​ಲೈನ್ ಶಿಕ್ಷಣ ಮಾರ್ಗಸೂಚಿಯಂತೆ ರಾಜ್ಯ ಆನ್​ಲೈನ್ ಶಿಕ್ಷಣ ಮಾರ್ಗಸೂಚಿಯನ್ನೂ ಅಳವಡಿಕೆ ಮಾಡಿಕೊಳ್ಳಬೇಕು. ಆನ್​ಲೈನ್ ಶಿಕ್ಷಣ ಮಿತಿಯಲ್ಲಿರಬೇಕು. ದಿನಪೂರ್ತಿ ಆನ್​ಲೈನ್ ತರಗತಿಗಳನ್ನು ನಡೆಸಬಾರದು. ಆನ್​ಲೈನ್ ಹಾಗೂ ಆಫ್​ಲೈನ್ ಎರಡರಲ್ಲಿಯೂ ತರಗತಿಗಳನ್ನು ನಡೆಸಬೇಕು. ಆನ್​ಲೈನ್ ಶಿಕ್ಷಣವನ್ನು ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಪರಿಗಣಿಸಬೇಕು, ಇದು ಶಾಶ್ವತ ಪರಿಹಾರವಲ್ಲ. ಅಧಿಕೃತವಾಗಿ ಶಾಲೆಗಳು ಆರಂಭವಾದ ನಂತರ ಆನ್​ಲೈನ್ ಶಿಕ್ಷಣ ನೀಡಬಾರದು ಎಂದು ಶಿಫಾರಸು ಮಾಡಲಾಗಿದೆ.

ಲೈವ್ ತರಗತಿಗಳನ್ನು, ರೆಕಾರ್ಡಿಂಗ್ ಶಿಕ್ಷಣ ನೀಡುವ ಜೊತೆಗೆ ಮಕ್ಕಳು ಭೌತಿಕವಾಗಿ ತೊಡಗಿಸಿಕೊಂಡು ಕ್ರಿಯಾಶೀಲ ಚಟುವಟಿಕೆ ನಡೆಸಬೇಕು. ಗ್ರಾಮೀಣ ಪ್ರದೇಶದ,  20ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ತರಗತಿಗಳಲ್ಲಿ ಪಾಠ ಮಾಡಲು ಈಗ ಅವಕಾಶ ಕಲ್ಪಿಸಬಹುದು. ಸಾಮಾಜಿಕ ಅಂತರ ಕಾಪಾಡಿಕೊಂಡು ದಿನದಲ್ಲಿ ಒಂದು ಗಂಟೆ ಅಥವಾ ಎರಡು ಗಂಟೆ ತರಗತಿ ನಡೆಸಬಹುದು. ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳನ್ನು ಆರಂಭಿಸಬಹುದು. ಕಂಟೋನ್ಮೆಂಟ್ ಜೋನ್ ವ್ಯಾಪ್ತಿ ಪ್ರದೇಶದ ಶಾಲೆಗಳನ್ನು ಹೊರತು ಪಡಿಸಿ ಉಳಿದ ಶಾಲೆಗಳನ್ನು ಆರಂಭಿಸಲು ಪ್ರೊ. ಶ್ರೀಧರ್​ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ.

ಪೂರ್ವ ಪ್ರಾಥಮಿಕ‌ ಶಾಲೆಯಲ್ಲಿ 30 ನಿಮಿಷ ಮೀರದಂತೆ ಪಾಲಕರ ಜೊತೆ ವಾರದಲ್ಲಿ ಒಂದು ದಿನ ಆನ್​ಲೈನ್ ಸಂವಹನ ನಡೆಸಬೇಕು, 1 ರಿಂದ 5ನೇ ತರಗತಿಯವರೆಗೆ 30ರಿಂದ 55 ನಿಮಿಷಗಳ ಎರಡು ಅವಧಿಗೆ ಮೀರದಂತೆ ದಿನ ಬಿಟ್ಟು ದಿನ ವಾರದಲ್ಲಿ ಗರಿಷ್ಠ ಮೂರು ದಿನ ತರಗತಿ ನಡೆಸಬೇಕು, 6 ರಿಂದ 8 ನೇ ತರಗತಿ 30-45 ನಿಮಿಷಗಳ 2 ಅವಧಿಗೆ ಮೀರದಂತೆ ವಾರದಲ್ಲಿ ಗರಿಷ್ಠ 5 ದಿನ ತರಗತಿ ನಡೆಸಬೇಕು, 9ರಿಂದ 10ನೇ ತರಗತಿಯವರೆಗೆ 30ರಿಂದ 45 ನಿಮಿಷಗಳ 4 ಅವಧಿಗೆ ಮೀರದಂತೆ ವಾರದಲ್ಲಿ ಗರಿಷ್ಠ 5 ದಿನಗಳ ಆನ್​ಲೈನ್ ಶಿಕ್ಷಣ ನೀಡಬಹುದು, ದಿನ ಬಿಟ್ಟು ತರಗತಿಗಳನ್ನು ನಡೆಸುವುದಕ್ಕಿಂತ ಪ್ರತಿದಿನ ತರಗತಿಗಳನ್ನು ನಡೆಸುವುದರಿಂದ ಕಲಿಕಾ ನಿರಂತರತೆ ಕಾಪಾಡಿಕೊಳ್ಳಬಹುದು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ