ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಧಿಕಾರಿಗಳ ವರ್ಗಾವಣೆ ಪರ್ವ: ಒಂದೇ ದಿನ 40 DYSP, 13 ಐಪಿಎಸ್​​ ವರ್ಗಾವಣೆ

Spread the love

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಶುರುವಾಗಿದ್ದು, 34 ಡಿವೈಎಸ್​ಪಿಗಳು ಹಾಗೂ 13 ಐಪಿಎಸ್​​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ(Assembly Elections)ಸಮೀಪಿಸುತ್ತದೆ.

ಈ ಹಿನ್ನೆಲೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಶುರುವಾಗಿದ್ದು, ಸಾರ್ವತ್ರಿಕ ಚುನಾವಣೆ ಸಂಬಂಧ 40 ಡಿವೈಎಸ್​ಪಿಗಳ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್​ಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆ ಆದ ಡಿವೈಎಸ್​ಪಿಗಳ ವಿವರ ಈ ಕೆಳಗಿನಂತಿದೆ.

  • ಜೆಸಿ ನಗರ ಎಸಿಪಿ ಮನೋಜ್ ಕುಮಾರ್ ಡಿಜಿಪಿ ಕಚೇರಿಗೆ ವರ್ಗಾವಣೆ.
  • ಸುಬ್ರಹ್ಮಣ್ಯಪುರ ಎಸಿಪಿ ಪವನ್ ಸಿಐಡಿಗೆ ವರ್ಗಾವಣೆ.
  • ಕವಿತಾ ಎಸಿಪಿ, ಸಿಐಡಿಗೆ ವರ್ಗಾವಣೆ.
  • ಸಿಸಿಬಿ ಎಸಿಪಿ ರೀನಾ ಸುವರ್ಣ ಸಿಐಡಿಗೆ ವರ್ಗಾವಣೆ.
  • ಸಿಸಿಬಿಯಲ್ಲಿ ಸ್ಯಾಂಟ್ರೋ ರವಿ ಪತ್ನಿ ವಿರುದ್ಧದ ಸುಳ್ಳು ದರೋಡೆ ಪ್ರಕರಣದ ತನಿಖೆ ನಡೆಸಿದ್ದ ಹೆಚ್ ಎಸ್ ಧರ್ಮೇಂದ್ರ, ಎಸಿಪಿ ಮಂಗಳೂರು ಐಜಿಪಿ ಕಚೇರಿಗೆ ವರ್ಗಾವಣೆ.
  • ಎಲೆಕ್ಟ್ರಾನಿಕ್ ಸಿಟಿ ಎಸಿಪಿಯಾಗಿ ರವಿಶಂಕರ್ ವರ್ಗಾವಣೆ.

ಅದೇ ರೀತಿಯಾಗಿ 13 ಐಪಿಎಸ್​​ ಅಧಿಕಾರಿಗಳ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಹೀಗಿದೆ.

  • ಕಾರ್ತಿಕ್​ ರೆಡ್ಡಿ- ರಾಮನಗರ ಪೊಲೀಸ್ ವರಿಷ್ಠಾಧಿಕಾರಿ
  • ವಿನಾಯಕ್ ಪಾಟೀಲ್-ಎಐಜಿಪಿ, ಬೆಂಗಳೂರು
  • ಸಂತೋಷ್ ಬಾಬು-ಎಸ್​​ಪಿ, ಗುಪ್ತಚರ ಇಲಾಖೆ
  • ದೇವರಾಜ್-ಡಿಸಿಪಿ, ಬೆಂಗಳೂರು ಉತ್ತರ ವಿಭಾಗದ ಡಿಸಿಪಿ
  • ಸಿರಿಗೌರಿ -ಎಸ್​​ಪಿ, ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್
  • ಟಿ.ಪಿ.ಶಿವಕುಮಾರ್ – ಎಸ್​ಪಿ, ಕೆಪಿಟಿಸಿಎಲ್​
  • ​ಹೆಚ್​​.ಶೇಖರ್ – ಡಿಸಿಪಿ, ಕಾನೂನು ಸುವ್ಯವಸ್ಥೆ, ಬೆಳಗಾವಿ ನಗರ
  • ಪದ್ಮಿನಿ ಸಾಹೋ – ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ
  • ಪ್ರದೀಪ್ ಗುಂಟಿ -ಎಸ್​​ಪಿ, ಕಾರಾಗೃಹ ಇಲಾಖೆ
  • ಎಂ.ಎಸ್.ಗೀತಾ – ಎಸ್​​ಪಿ, ಪೊಲೀಸ್ ತರಬೇತಿ ಶಾಲೆ, ಮೈಸೂರು
  • ರಾಮರಾಜನ್- ಪೊಲೀಸ್ ವರಿಷ್ಠಾಧಿಕಾರಿ, ಕೊಡಗು
  • ರವೀಂದ್ರ ಕಾಶಿನಾಥ್ – ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು
  • ಎಂ.ಎ.ಅಯ್ಯಪ್ಪ – ಎಸ್​​ಪಿ, ಗುಪ್ತಚರ ಇಲಾಖೆ

Spread the love

About Laxminews 24x7

Check Also

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ

Spread the loveಹದಿನಾರು ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ, ಹೆಚ್ಚುತ್ತಿರುವ ಮೊಬೈಲ್ ಬಳಕೆ ಮಕ್ಕಳ ಮೇಲೆ ಪರಿಣಾಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ