ಸವದತ್ತಿ: ಬಹುಭಾಷಾ ಸಂಗಮ ಸಂಸ್ಥೆಯಿಂದ ಜ.28ರಂದು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಭಾರತ ಅಭಿವೃದ್ಧಿಯ ಚಿಂತನೆಗಳ ಒಂದು ದಿನದ ಅಂತರರಾಷ್ಟ್ರೀಯ ವಿಚಾರ ಸಂಕಿರಣ
ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಮಾರುತಿ ದೊಂಬರ ಹೇಳಿದರು.
ಇಲ್ಲಿನ ಬೆಳ್ಳುಬ್ಬಿ ಕಾಲೇಜಿನಲ್ಲಿ ಶುಕ್ರವಾರ ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅಮೇರಿಕಾ ಪತ್ರಕರ್ತೆ ಡಾ.ಅನಿತಾ ಕಪೂರ ಆಶಯ ನುಡಿ ತಿಳಿಸಲಿದ್ದಾರೆ.
ನವದೆಹಲಿಯ ಪಿಜಿಡಿಎವಿ ಕಾಲೇಜಿನ ಪ್ರಾಧ್ಯಾಪಕ ಡಾ.ಹರೀಶ ಅರೋರಾ
ಮುಖ್ಯ ಅಥಿತಿಗಳಾಗಿ, ಡಾ.ವಿದ್ಯಾವತಿ ರಜಪೂತ, ಡಾ.ಎನ್.ಎ. ಕೌಜಗೇರಿ ಅಥಿತಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಡಾ.ಕೆ. ರಾಮರಡ್ಡಿ, ಡಾ.ಅರುಂಧತಿ ಬದಾಮಿ ಇದ್ದರು.
Laxmi News 24×7