Breaking News

ಆಪರೇಷನ್​ ಹಸ್ತದತ್ತ ಕಾಂಗ್ರೆಸ್​ ಚಿತ್ತ: ಸಮರ್ಥರಿಲ್ಲದ ಕಡೆ ತೀವ್ರ ಹುಡುಕಾಟ

Spread the love

ಆಪರೇಷನ್​ ಹಸ್ತದತ್ತ ಕಾಂಗ್ರೆಸ್​ ಚಿತ್ತ: ಸಮರ್ಥರಿಲ್ಲದ ಕಡೆ ತೀವ್ರ ಹುಡುಕಾಟ

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್​ ಎದುರಾಳಿಯ ಅಸಮಾಧಾನಿತರಿಗೆ ಬಲೆ ಬೀಸಿದ್ದು, ಎರಡು ಲೆಕ್ಕಾಚಾರದಲ್ಲಿ ಎದುರಾಳಿ ಟಿಕೆಟ್​ ಆಕಾಂಗಳನ್ನು ಸೆಳೆಯುವ ಕಾರ್ಯಕ್ಕೆ ಪದ ಹೈಕಮಾಂಡ್​ ಸ್ಪಷ್ಟ ಸೂಚನೆ ನೀಡಿದೆ.

ಚುನಾವಣೆ ಕಾವು ಹೆಚ್ಚಾದ ವೇಳೆ ಯಾವ ಪಕ್ಕೆ ಹೆಚ್ಚೆಚ್ಚು ಮಂದಿ ಸೇರ್ಪಡೆಯಾಗುತ್ತಾರೋ ಆ ಪದ ಪರ ಟ್ರೆಂಡ್​ ಸೃಷ್ಟಿಯಾಗುತ್ತಿದೆ ಎಂಬ ರಾಜಕೀಯ ವಾದವೊಂದಿದೆ.

ಇದಕ್ಕೆ ಪೂರಕವಾಗಿ ಹೆಚ್ಚು ಮಂದಿಯನ್ನು ಸೇರಿಸಿಕೊಳ್ಳಲು ಪಗಳು ಮುಂದಾಗುವುದು ಸಹಜ. ಈ ನಿಟ್ಟಿನಲ್ಲಿ ಕಾಂಗ್ರೆಸ್​ ವಿಶೇಷ ಗಮನ ಹರಿಸಿದೆ. ಒಂದು ವರ್ಷದ ಹಿಂದೆಯೇ ಜೆಡಿಎಸ್​ ಬಲ ಕುಗ್ಗಿಸಲು ಆ ಪದ ಶಾಸಕರು, ಅಭ್ಯರ್ಥಿಗಳನ್ನು ಸೆಳೆಯಲು ವಿಶೇಷ ಕಾರ್ಯತಂತ್ರ ರೂಪಿಸಿತ್ತು. ಅದರ ಭಾಗವಾಗಿ ಒಂದಷ್ಟು ಮಂದಿ ಪ ಸೇರಿದ್ದರೆ ಮತ್ತೊಂದಿಷ್ಟು ಮಂದಿ ಪದ ಹೊಸ್ತಿಲ ಬಳಿ ಬಂದು ನಿಂತಿದ್ದಾರೆ. ಈಗ ಮತ್ತೊಂದು ಸುತ್ತಿನಲ್ಲಿ ಆಪರೇಷನ್​ ನಡೆಸಬೇಕೆಂಬ ಬಗ್ಗೆ ಕಾಂಗ್ರೆಸ್​ನಲ್ಲಿ ಚರ್ಚೆಯಾಗಿದೆ.

ಯಾವೆಲ್ಲ ಕ್ಷೇತ್ರದಲ್ಲಿ ಪದ ಕಡೆಯಿಂದ ಪ್ರಬಲ ಅಭ್ಯರ್ಥಿ ಇಲ್ಲವೋ ಅಂತಹ ಕಡೆಗಳಲ್ಲಿ ಜೆಡಿಎಸ್​ ಅಥವಾ ಬಿಜೆಪಿಯ ಅಭ್ಯರ್ಥಿಗಳು ಪ್ರಬಲರಾಗಿದ್ದರೆ ಅವರನ್ನು ಮಾತನಾಡಿಸಿ ಎಂಬ ಸೂಚನೆ ದೆಹಲಿಯಿಂದ ರಾಜ್ಯ ಕಾಂಗ್ರೆಸ್​ಗೆ ಬಂದಿದ್ದು, ಆ ಪ್ರಕಾರ ಮಾತುಕತೆ ನಡೆದಿದೆ. ಮೊದಲ ಸುತ್ತಿನ ಆಪರೇಷನ್​ನಲ್ಲಿ ಯಲ್ಲಾ ಪುರ, ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ ಆಕಾಂಗಳನ್ನು ಕಾಂಗ್ರೆಸ್​ ಬರಮಾಡಿಕೊಂಡಿತು. ಈಗ ಬೆಂಗಳೂರಿನ ಕೆ.ಆರ್​.ಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಂದೀಶ್​ ರೆಡ್ಡಿಗೆ ಗಾಳ ಹಾಕಿದ್ದು ಮಾತುಕತೆ ನಡೆಸಿದೆ. ಸಚಿವ ಬೈರತಿ ಬಸವರಾಜ್​ ಕಾಂಗ್ರೆಸ್​ಗೆ ಮರಳುವಂತೆ ಆಹ್ವಾನ ನೀಡಿದ್ದರೂ ಅವರು ಈವರೆಗೆ ಯಾವುದೇ ಉತ್ತರ ನೀಡಿರಲಿಲ್ಲ. ಹೀಗಾಗಿ ನಂದೀಶ್​ ರೆಡ್ಡಿಯವರನ್ನು ಮಾತನಾಡಿಸಲಾಗಿದೆ. ನಂದೀಶ್​ ರೆಡ್ಡಿ ಕೂಡ ಬಿಜೆಪಿಯ ಪ್ರಮುಖರಿಗೆ ವಿಚಾರ ಮುಟ್ಟಿಸಿದ್ದು, ತಮಗೆ ಅವಕಾಶ ಕೊಡುವುದನ್ನು ಖಾತ್ರಿ ಮಾಡದೇ ಇದ್ದರೆ ನಾನು ಕಾಂಗ್ರೆಸ್​ ಆಹ್ವಾನದ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಸಂದೇಶ ಕಳಿಸಿದ್ದಾರೆನ್ನಲಾಗಿದೆ. ಹೊಸಕೋಟೆ ವಿಧಾನಸಭಾ ೇತ್ರದ ಬೆಳವಣಿಗೆ ಬಗ್ಗೆ ಕಾಂಗ್ರೆಸ್​, ಬಿಜೆಪಿ ಪರಸ್ಪರ ಕಣ್ಣಿಟ್ಟಿವೆ. ಉಪ ಚುನಾವಣೆಯಲ್ಲಿ ಪೇತರನಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ ಶರತ್​ ಬಚ್ಚೇಗೌಡ ಕಾಂಗ್ರೆಸ್​ ಸಖ್ಯ ತೊರೆದು ಬಿಜೆಪಿಗೆ ಮರಳುವ ಅವಕಾಶವಿದೆ, ಹಾಗೊಂದು ವೇಳೆ ಶರತ್​ ಹೆಜ್ಜೆ ಮುಂದಿಟ್ಟರೆ ಎಂ.ಟಿ.ಬಿ.ನಾಗರಾಜ್​ ಕಾಂಗ್ರೆಸ್​ನತ್ತ ಜಿಗಿಯಲಿದ್ದಾರೆ ಎಂಬ ವಾದವಿದೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ