ಬೆಂಗಳೂರು: ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿಗೆ ದೊಡ್ಡ ಶಾಕ್ ಆಗಿದ್ದು ‘ಶಬಾಷ್ ಬಡಡಿ ಮಗನೇ’ ಚಿತ್ರದ ನಿರ್ಮಾಪಕ ಅರೆಸ್ಟ್ ಆಗಿದ್ದಾರೆ. ನಿರ್ಮಾಪಕ ಅರೆಸ್ಟ್ ಆಗುತ್ತಿದ್ದಂತೆಯೇ ಶಬಾಷ್ ಬಡ್ಡಿ ಮಗನೇ ಸಿನಿಮಾ ನಿಂತು ಹೋಗಿದೆ.
ಕಳೆದ ವರ್ಷ ಅಕ್ಟೋಬರ್ 2022 ರ ದಸರಾ ವೇಳೆಗೆ ಮುಹೂರ್ತ ಇಟ್ಟು ಶುರು ಮಾಡಿದ್ದ ಶಬಾಷ್ ಬಡ್ಡಿ ಮಗನೇ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ನಾಯಕ ನಟನಾಗಿ ಅಭಿನಸುತ್ತಿರುವ ಮೊದಲ ಸಿನಿಮಾ ಆಗಿದೆ.
ಈ ಪ್ರಕಾಶ ಮಾಡಿದ್ದೇನು?
420 ವಂಚನೆ ಕೇಸಿನಲ್ಲಿ ಸಿನಿಮಾದ ನಿರ್ಮಾಪಕ ಪ್ರಕಾಶ್ ಅರೆಸ್ಟ್ ಆಗಿದ್ದು ಆಡುಗೋಡಿ ಠಾಣೆ ಪೊಲೀಸರು ನಿರ್ಮಾಪಕ ಪ್ರಕಾಶ್ನನ್ನು ಅರೆಸ್ಟ್ ಮಾಡಿದ್ದಾರೆ. ಈತ KMF ನಲ್ಲಿ ವಿವಿಧ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದ.
ಈ ನಿರ್ಮಾಪಕ ಪ್ರಕಾಶ್, 20 ಲಕ್ಷ ರೂ.ಗೆ KMFನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸೋದಾಗಿ ನಂಬಿಸಿದ್ದ ಎಂದು ಆರೋಪಿಸಲಾಗಿದೆ. ಈತ ಚಿಕ್ಕಬಳ್ಳಾಪುರ ಮೂಲದ ಚರಣ್ ಎಂಬುವವರಿಂದ ಮುಂಗಡವಾಗಿ 10 ಲಕ್ಷ ರೂ. ಕೂಡ ಪಡೆದಿದ್ದ.
ಕಳೆದ ಡಿಸೆಂಬರ್ ನಲ್ಲಿ KMFನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗಾಗಿ ಲಿಖಿತ ಪರೀಕ್ಷೆ ನಡೆದಿತ್ತು. ಆ ಸಂದರ್ಭ ಪ್ರಕಾಶ್, KMF ನಿರ್ದೇಶಕರ ಸರ್ಕಾರಿ ಲಾಂಛನ ನಕಲು ಮಾಡಿ ಆದೇಶ ಪ್ರತಿಯನ್ನು ಹಣ ಕೊಟ್ಟವರಿಗೆ ಪ್ರಕಾಶ್ ನೀಡುತ್ತಿದ್ದ.
ಈ ರೀತಿ ಅನೇಕರು ನಕಲಿ ಆದೇಶ ಪ್ರತಿಗಳನ್ನು ಹಿಡಿದು KMFಗೆ ಬರುವುದನ್ನು ಕಂಡ ಚರಣ್ ರಾಜ್ ಹಾಗೂ KMF ಅಧಿಕಾರಿಗಳು ಆಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದರು. ಹೀಗೆ, KMF ಅಧಿಕಾರಿಗಳ ದೂರಿನ ಅನ್ವಯ ಐಪಿಸಿ 420 ಅಡಿಯಲ್ಲಿ ನಿರ್ಮಾಪಕ ಪ್ರಕಾಶ್ನ್ನು ಬಂಧಿಸಲಾಗಿದೆ.