Breaking News

ಚಿಕ್ಕೋಡಿ: ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದ ಉಪನೋಂದಣಾಧಿಕಾರಿ

Spread the love

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಜಮೀನು ಖರೀದಿಯ ನೋಂದಣಿ ಮಾಡಿಕೊಡಲು ₹30 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದ ಚಿಕ್ಕೋಡಿ ಉಪನೋಂದಣಾಧಿಕಾರಿ ಜಿ.ಪಿ. ಶಿವರಾಜು, ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಹಾರಾಷ್ಟ್ರದ ಇಚಲಕರಂಜಿಯ ರಾಜು ಲಕ್ಷ್ಮಣ ಪಾಚ್ಚಾಪುರೆ ಎನ್ನುವವರು ಚಿಕ್ಕೋಡಿ ತಾಲ್ಲೂಕಿನ ಡೊಣೆವಾಡ ಗ್ರಾಮದಲ್ಲಿ ಜಮೀನು ಖರೀದಿಸಿದ್ದರು.

ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕವೂ ಸೇರಿದಂತೆ ಎಲ್ಲವನ್ನು ತುಂಬಿದ್ದರು. ಆದರೆ, ಜಮೀನನ್ನು ಅವರ ಹೆಸರಿಗೆ ಮಾಡಿಕೊಡಲು ಉಪನೋಂದಣಾಧಿಕಾರಿ ₹ 30 ಸಾವಿರ ಲಂಚ ಕೇಳಿದ್ದರು. ಈ ಬಗ್ಗೆ ರೈತ ರಾಜು ಅವರು ದೂರು ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಯಶೋದಾ ವಂಟಗೂಡಿ ತಿಳಿಸಿದ್ದಾರೆ.

ಶಿವರಾಜು ಅವರು ಮಂಗಳವಾರ ಲಂಚದ ಹಣ ತೆಗೆದುಕೊಳ್ಳುವ ವೇಳೆ ಅವರನ್ನು ಹಣದ ಸಮೇತ ಹಿಡಿಯಲಾಗಿದೆ. ಈ ಕೃತ್ಯಕ್ಕೆ ಸಹಕರಿಸಿದ ಉಪನೋಂದಣಾಧಿಕಾರಿಯ ಸಹಾಯಕ ಹುಸೇನ್‌ ಇಮಾಮ್‌ಸಾಬ್‌ ರೆಹಮಾನ್‌ಸಾಬ್‌ ಹಾಗೂ ಮಧ್ಯವರ್ತಿ, ಕಂಪ್ಯೂಟರ್‌ ಆಪರೇಟರ್‌ ಸಂದೀಪ ಶಂಕರ ಪಾಟೀಲ ಅವರನ್ನೂ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


Spread the love

About Laxminews 24x7

Check Also

ಹಸಿದ ಹೊಟ್ಟೆಗೆ ಆಸರೆ: ಮುನವಳ್ಳಿಯಲ್ಲಿ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ!

Spread the love​”ಬಡವರ ಮತ್ತು ಶ್ರಮಿಕ ವರ್ಗದ ಜನರ ಹಸಿವು ನೀಗಿಸುವ ಉದ್ದೇಶದಿಂದ, ಇಂದು ಮುನವಳ್ಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ