ಬೆಳಗಾವಿ: ‘ಗೋಗಳ ರಕ್ಷಣೆ ಹಾಗೂ ಪಾಲನೆ ಮಾಡುವುದು ಪುಣ್ಯದ ಕೆಲಸ. ಇದಕ್ಕಾಗ ಗೋ ಶಾಲೆ ತೆರೆದ ಆಸರೆ ಫೌಂಡೇಷನ್ ಕಾರ್ಯ ಶ್ಲಾಘನೀಯ ಈ ಕಾರ್ಯಕ್ಕೆ ಬೇಕಾದ ಸಹಾಯ, ಸಹಕಾರ ಒದಗಿಸಲು ಸದಾ ಸಿದ್ಧ’ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.
ಇಲ್ಲಿನ ಆಸರೆ ಫೌಂಡೇಷನ್ ವತಿಯಿಂದ ತಾಲ್ಲೂಕಿನ ಕೆ.ಕೆ.ಕೊಪ್ಪ ಗ್ರಾಮದಲ್ಲಿ ತೆರೆದ ಗೋಶಾಲೆಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಚಲನಚಿತ್ರ ನಟ, ನಿರ್ಮಾಪಕ ಅಕ್ಷಯ್ ಚಂದ್ರಶೇಖರ್ ಮಾತನಾಡಿದರು. ಫೌಂಡೇಷನ್ ಅಧ್ಯಕ್ಷ ಆಕಾಶ ಚಂದ್ರಶೇಖರ ಸ್ವಾಗತಿಸಿದರು. ಉಪಾಧ್ಯಕ್ಷ ರಾಜೇಂದ್ರ ಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಕಂಬಿ ಹಾಗೂ ಮುಖಂಡರು ಇದ್ದರು. ಸಂಗೀತ ನಿರ್ದೇಶಕ ಗಗನದೀಪ ಪ್ರಾರ್ಥನೆ ಮಾಡಿದರು. ಮುಕ್ತಿಮಠದ ಸ್ವಾಮೀಜಿ ಆಶೀರ್ವದಿಸಿದರು. ಸಾಹಿತಿ ಆಶಾ ಯಮಕನಮರಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.
Laxmi News 24×7