Breaking News

ಕಾಂಗ್ರೆಸ್ಸಿನದು ಫ್ಯಾಮಿಲಿ ಪಾಲಿಟಿಕ್ಸ್ ಜತೆಗೆ ಜಾತಿ ರಾಜಕಾರಣ; ನಡ್ಡಾ ಟೀಕೆ

Spread the love

ವಿಜಯಪುರ: ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆ ಹಮ್ಮಿಕೊಂಡಿರುವ ವಿಜಯಸಂಕಲ್ಪ ಅಭಿಯಾನಕ್ಕೆ ಸಿಂದಗಿಯಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ‌ ನಡ್ಡಾ ಜ್ಯೋತಿ ಬೆಳಗಿಸುವ ಮೂಲಕ ಅದ್ದೂರಿ ಚಾಲನೆ ನೀಡಿದರು.

 

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ‌ ಎಲ್ಲರದ್ದಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ, ಎಂಬ ಧ್ಯೇಯದೊಂದಿಗೆ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದ ಪರಂಪರೆ, ಸಂಸ್ಕೃತಿ, ಕವಿ, ಸಾಹಿತ್ಯ, ಸಂಪ್ರದಾಯದ ಗೌರವನ್ನು ಪ್ರಧಾನಿ ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಭಾರತ ತೋಡೋ ನಡೆ ಅನುಸರಿಸುತ್ತಿದ್ದಾರೆ. ಸಮಾಜವನ್ನು ಒಡೆದಾಳುವ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಅರಾಜಕತೆ ಸೃಷ್ಠಿಸುತ್ತಿದ್ದು, ಜಾತಿವಾದ, ಕುಟುಂಬವಾದ ಅನುಸರಿಸುತ್ತಿದೆ‌. ಅಭಿವೃದ್ಧಿ ಮಂತ್ರ ಕಡೆಗಣಿಸಿದೆ ಎಂದು ಟೀಕಿಸಿದರು.

ದೇಶದ ಪ್ರಗತಿಯಲ್ಲಿ ಕರ್ನಾಟಕದ ಪಾತ್ರ ಪ್ರಮುಖವಾಗಿದೆ. ಡಿಜಿಟಲ್ ಇಂಡಿಯಾ, ಇಲೆಕ್ಟ್ರಾನಿಕ್ ಪ್ರಗತಿ, ಕೈಗಾರೀಕರಣ ಬಗ್ಗೆ ಇಂದು ಮಾತನಾಡುತ್ತಿದ್ದೇವೆ ಎಂದರೆ ಅದರಲ್ಲಿ ಕರ್ನಾಟಕದ ಪಾತ್ರ ಪ್ರಮುಖವಾಗಿದೆ ಎಂದರು.


Spread the love

About Laxminews 24x7

Check Also

ಕೊಟಗುಂಡಹುಣಸಿಯಲ್ಲಿ ನಿವ ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ ಹೆಚ್ಚು.

Spread the loveಕೊಟಗುಂಡಹುಣಸಿಯಲ್ಲಿ ನಿವ ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ