ವಾಷಿಂಗ್ಟನ್: ಆತಂಕ ಮೂಡಿಸಿರುವ ಕೊರೊನಾ ತಡೆಗಟ್ಟಲು ರಾಷ್ಟ್ರಗಳು ಲಾಕ್‌ಡೌನ್ ಜಾರಿ ಮಾಡಿ ಸಾಮಾಜಿಕ ಅಂತ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಎಂದು ಸೂಚನೆ ನೀಡುತ್ತಿವೆ. ಆದರೆ ಅಮೆರಿಕದಲ್ಲಿ ಕೊರೊನಾ ಹಬ್ಬಿಸಿಲು ವಿದ್ಯಾರ್ಥಿಗಳು ಸ್ಪರ್ಧೆಯನ್ನು ಆಯೋಜಿಸಿದ್ದಾರೆ.
ʼಯಾರಿಗೆ ಮೊದಲು ಕೊರೊನಾ ಬರುತ್ತದೆ?ʼ ಎಂಬ ಸ್ಪರ್ಧೆಯ ಪಾರ್ಟಿಯನ್ನು ಅಮೆರಿಕ ಅಲಬಾಮಾದ ಟಸ್ಕಲೂಸಾ ಎಂಬಲ್ಲಿ ಆಯೋಜಿಸಲಾಗಿತ್ತು.
ಈ ಹುಚ್ಚಾಟದ ಸ್ಪರ್ಧೆಗೆ ಕೊರೊನಾ ಪಾಸಿಟಿವ್ ಬಂದವರನ್ನು ಉದ್ದೇಶಪೂರ್ವಕವಾಗಿ ಕರೆಸಲಾಗಿತ್ತು. ಕೊರೊನಾ ಬಾರದವರನ್ನು ಆಹ್ವಾನಿಸಲಾಗಿತ್ತು. ಕೊರೊನಾ ಬಾರದವರು ಪಾಸಿಟಿವ್ ಬಂದವರ ಜೊತೆ ಪಾರ್ಟಿ ಮಾಡಬೇಕು. ಈ ಮೂಲಕ ಯಾರಿಗೆ ಕೊರೊನಾ ಮೊದಲು ಬರುತ್ತದೋ ಅವರಿಗೆ ಬಹುಮನ ನೀಡಲಾಗುತ್ತದೆ ಎಂದು ಆಯೋಜಕರು ಮೊದಲೇ ತಿಳಿಸಿದ್ದರು.
ಪಾರ್ಟಿಗೆ ಬಂದವರು ಪಾಟ್ ಒಂದರಲ್ಲಿ ಹಣವನ್ನು ಹಾಕಬೇಕು. ಮೊದಲು ಯಾರಿಗೆ ಕೊರೊನಾ ಬರುತ್ತದೋ ಅವರಿಗೆ ಈ ಪಾಟ್‌ನಲ್ಲಿ ಸಂಗ್ರಹವಾದ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಆಯೋಜಕರು ಹೇಳಿದ್ದರು.
ನಗರದಲ್ಲಿ ಕೊರೊನಾ ಹರಡಿಸುವ ಸ್ಪರ್ಧೆ ನಡೆದಿರುವುನ್ನು ಟಸ್ಕಲೂಸಾ ಮೇಯರ್ ಒಪ್ಪಿಕೊಂಡಿದ್ದಾರೆ. ಆದರೆ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.