Home / ರಾಜಕೀಯ / ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದು ವಾರೆ ನೋಟ: ಕೈ ಕಾರ್ಯಕರ್ತೆ ಲಾವಣ್ಯ ಬಲ್ಲಾಳ್​ ಕೊಟ್ಟ ಪ್ರತಿಕ್ರಿಯೆ ಹೀಗಿದೆ..

ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದು ವಾರೆ ನೋಟ: ಕೈ ಕಾರ್ಯಕರ್ತೆ ಲಾವಣ್ಯ ಬಲ್ಲಾಳ್​ ಕೊಟ್ಟ ಪ್ರತಿಕ್ರಿಯೆ ಹೀಗಿದೆ..

Spread the love

ಬೆಂಗಳೂರು: ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಗಿದೆ. ಫೇಸ್​ಬುಕ್​ ಸ್ಟೋರಿ, ವಾಟ್ಸ್​ಆಯಪ್​ ಸ್ಟೇಟಸ್ ಹಾಗೂ ಇನ್​ಸ್ಟಾಗ್ರಾಂ ಸ್ಟೋರಿ ಎಲ್ಲಿ ನೋಡಿದರು ಸಿದ್ದರಾಮಯ್ಯ ಅವರ ವಿಡಿಯೋ ವೈರಲ್​ ಆಗಿದೆ.

ಅಲ್ಲದರೆ, ಸಿಕ್ಕಾಪಟ್ಟೆ ಟ್ರೋಲ್​ ಸಹ ಆಗಿದೆ.

ಹಾಗಾದರೆ ಆ ವಿಡಿಯೋ ಯಾವುದು ಅಂತಿರಾ… ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್​ ಮಹಿಳಾ ಸಮಾವೇಶದಲ್ಲಿ ವೇದಿಕೆ ಮೇಲಿಂದ ಕೆಳಗೆ ಇಳಿಯುವಾಗ ಸಿದ್ದರಾಮಯ್ಯ ಅವರು ಕಾರ್ಯಕ್ರಮ ನಿರೂಪಕಿಯನ್ನು ವಾರೆಗಣ್ಣಿಂದ ನೋಡಿದರು. ಹಾಗೇ ನಿರೂಪಕಿಯನ್ನು ನೋಡಿಕೊಂಡೇ ವೇದಿಕೆಯಿಂದ ಹೊರ ನಡೆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಮೆನ್​ ವಿಲ್​ ಬಿ ಮೆನ್​ ಎಂದು ಟ್ರೋಲ್​ ಆಗಿದೆ.

ಇದೀಗ ವಿಡಿಯೋದಲ್ಲಿರುವ ಮಹಿಳಾ ನಿರೂಪಕಿ ಅಥವಾ ಕೈ ಕಾರ್ಯಕರ್ತೆ ವಿಡಿಯೋ ಕುರಿತು ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೆ ಕೈ ಕಾರ್ಯಕರ್ತೆಯ ಹೆಸರು ಲಾವಣ್ಯ ಬಲ್ಲಾಳ್​.

ಸಿದ್ದರಾಮಯ್ಯ ಅವರು ವೇದಿಕೆ ಬಂದಾಗ ನಾನು ನಿರೂಪಣೆ ಮಾಡುತ್ತಿದ್ದೆ. ಈ ವೇಳೆ ಸಿದ್ದರಾಮಯ್ಯ ಅವರನ್ನು ತುಂಬಾ ಜನ ಸುತ್ತುವರಿದಿದ್ದರೂ ನಿರೂಪಣೆ ಯಾರು ಮಾಡುತ್ತಿದ್ದಾರೆ ಎಂಬ ಕುತೂಹಲದಿಂದ ನನ್ನನ್ನು ನೋಡಿದರು. ನೋಡಿದ ಬಳಿಕ ಇವಳೇನಾ ಅಂತಾ ಅಲ್ಲಿಂದ ಹೊರಟರು ಎಂದು ಲಾವಣ್ಯ ಬಲ್ಲಾಳ್ ಅವರು ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯ ಸರ್​ ಅವರಿಗೆ ನಾನು ತುಂಬಾ ಪರಿಚಯ. ಕಾಂಗ್ರೆಸ್​ನಲ್ಲಿ ತುಂಬಾ ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಅವರು ನನ್ನನ್ನು ನೋಡಿದ್ದಾರೆ. ನೀವು ಆ ವಿಡಿಯೋ ನೋಡಿರಬಹುದು. ಇವಳೇನಾ ಎಂದು ಹೇಳಿಕೊಂಡು ಹೋಗುತ್ತಾರೆ. ಕುತೂಹಲಕ್ಕೆ ಯಾರು ಅಂತಾ ನೋಡಿದರಷ್ಟೇ, ಅದನ್ನೇ ಕೆಲವರು ಟ್ರೋಲ್​ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಸಾಹೇಬರು ನಮಗೆಲ್ಲ ಸ್ಫೂರ್ತಿ. ಕಾರ್ಯಕ್ರಮ ಹಿಂದಿನ ದಿನ ಸಂಜೆಯು ಅವರ ಮನೆಗೆ ಕೆಲವು ಮಾರ್ಗದರ್ಶನ ಪಡೆಯಲು ಹೋಗಿದ್ದೆ. ಸಿದ್ದರಾಮಯ್ಯ ಸಾಹೇಬರಿಗೆ ನಾನು ಚೆನ್ನಾಗಿ ಪರಿಚಯವಿದ್ದೇನೆ. ಪಕ್ಷದ ವಕ್ತಾರೆ ಎಂಬುದು ಸಹ ಅವರಿಗೆ ಗೊತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಕೆಲಸ ಮಾಡುತ್ತಿದ್ದೇನೆ ಎಂಬ ವಿಚಾರ ಗೊತ್ತಿದೆ ಎಂದರು.


Spread the love

About Laxminews 24x7

Check Also

ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು

Spread the love ಮಹಾಲಿಂಗಪುರ: ರೈತ ಸಮುದಾಯವು ಜಾಣತನದಿಂದ ಒಕ್ಕಲುತನ ಮಾಡಿದರೆ ಕಡಿಮೆ ಜಮೀನು, ಅಲ್ಪಾವಧಿಯಲ್ಲಿಯೇ ಲಾಭವನ್ನು ಮಾಡಿಕೊಳ್ಳಬಹುದು ಎಂಬುದನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ