Breaking News

5ಜಿ ಕಾಲದಲ್ಲೂ ಹಿಂಡಲಗಾ ಜೈಲಿನಲ್ಲಿ 2ಜಿ ಜಾಮರ್!

Spread the love

ಬೆಳಗಾವಿ: 5G ಕಾಲಕ್ಕೆ ನಾವೆಲ್ಲ ಬಂದಿದ್ದರೂ, ಬೆಳಗಾವಿ ‌ಹಿಂಡಲಗಾ ಜೈಲಿನಲ್ಲಿ ಮಾತ್ರ ಇನ್ನೂ 2ಜಿ ಜಾಮರ್ ಕಾರ್ಯನಿರ್ವಹಿಸುತ್ತಿದೆ. ತಂತ್ರಜ್ಞಾನ ಅಪ್ಡೇಟ್‌ ಮಾಡದ ಕಾರಣ ಖೈದಿಗಳು ಅಕ್ರಮ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ.

 

ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಹೋದ ಹಿನ್ನೆಲೆಯಲ್ಲಿ ತನಿಖೆ ನಡೆದಾಗ ಈ ಸ್ಫೋಟಕ ಮಾಹಿತಿ ಹೊರಬಿದ್ದು ಎಲ್ಲರನ್ನೂ ಆಶ್ಚರ್ಯಕ್ಕೆ ಈಡು ಮಾಡಿದೆ.

ಜೈಲಿನಿಂದಲೇ ಕೇಂದ್ರ ಸಚಿವ ನಿತಿನ್​ ಗಡ್ಕರಿಗೆ ಮಂಗಳೂರು ಮೂಲದ ಜಯೇಶ್ ಪೂಜಾರಿ ಎಂಬ ಕೈದಿ ಕರೆ, ಮೆಸೇಜ್ ಮಾಡಿ 100 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಜೈಲಿನಿಂದಲೇ ಖೈದಿಗಳು ದರ್ಬಾರ್ ನಡೆಸುತ್ತಿದ್ದು, ಉದ್ಯಮಿಗಳಿಗೆ ರಾಜಕಾರಣಿಗಳಿಗೆ, ಇವರ ಕಾಟ ನಿತ್ಯವೂಬ ಇದ್ದಿದ್ದೇ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಜೈಲಿನಲ್ಲಿ ‌ಇದ್ದುಕೊಂಡು ಫೆಸ್​ಬುಕ್​ನಲ್ಲಿ ಕೈದಿಗಳು ಆಯಕ್ಟಿವ್ ಆಗಿದ್ದಾರಂತೆ. ಹೀಗಾಗಿ ಜೀವ ಭಯದಲ್ಲೇ ಉದ್ಯಮಿಗಳು, ರಾಜಕಾರಣಿಗಳು ನಿತ್ಯವೂ ಕಾಲ ತಳ್ಳುವಂತಾಗಿದೆ.

ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಹಳೆ ಜೈಲು ಎಂದು (ಕು)ಖ್ಯಾತಿ ಗಳಿಸಿರುವ ಹಿಂಡಲಗಾ ಜೈಲಿನ ಉನ್ನತೀಕರಣ ಮಾಡದೆ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ತಂತ್ರಜ್ಞಾನ ಅಪ್ಡೇಟ್‌ ಮಾಡದೇ ನಿರ್ಲಕ್ಷ್ಯ:
ದೇಶದಲ್ಲಿ 5ಜಿ ನೆಟ್‌ವರ್ಕ್​ಗೆ ಇತ್ತೀಚೆಗಷ್ಟೇ ಚಾಲನೆ ನೀಡಲಾಗಿತ್ತು. ಆದರೂ ಇನ್ನೂ ಹಿಂಡಲಗಾ ಜೈಲಿನಲ್ಲಿ 2ಜಿ ಜಾಮರ್ ಕಾರ್ಯನಿರ್ವಹಿಸುತ್ತಿದೆ. 2ಜಿ ಜಾಮರ್ ಇರುವ ಈ ಜೈಲಿನಲ್ಲಿ ಸರಾಗವಾಗಿ ಕೈದಿಗಳು 4ಜಿ ಫೋನ್ ಬಳಸಿ ತಮ್ಮ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. 2ಜಿ ಜಾಮರ್ ಕೈದಿಗಳ ಮೊಬೈಲ್ ಫೋನ್ ನೆಟ್​ವರ್ಕ್ ಮೇಲೆ ಪರಿಣಾಮ ಬೀರದ ಕಾರಣ ಇಷ್ಟೆಲ್ಲಾ ಅನಾಹುತ ನಡೆದಿದೆ. ಹೀಗಾಗಿಯೇ ಈ ಕೈದಿಗಳು ಜೈಲಿನಲ್ಲಿದ್ದುಕೊಂಡು ಉದ್ಯಮಿಗಳು, ರಾಜಕೀಯ ನಾಯಕರಿಗೆ ಬೆದರಿಕೆ ಕರೆ ಮಾಡುತ್ತಿದ್ದಾರೆ.

ಈ ಜೈಲಿನಲ್ಲಿ 4ಜಿ ಜಾಮರ್ ಅಳವಡಿಸಿದರೆ ಸಾಕು. ನೆಟ್​ವರ್ಕ್ ಜಾಮ್ ಆಗಿ, ಫೋನ್ ಕರೆಗಳು, ಮೆಸೇಜ್​ಗಳು ಎಲ್ಲವೂ ಸ್ಥಗಿತಗೊಳ್ಳುತ್ತದೆ. ನೆಟ್​ವರ್ಕ್ ಅಪ್‌ಗ್ರೇಡ್ ತಕ್ಕಂತೆ ಜಾಮರ್ ಅಳವಡಿಕೆಗೆ ಸರ್ಕಾರ ಮುಂದಾಗಬೇಕಿದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಬೇಕಿದ್ದ ಜೈಲಾಧಿಕಾರಿಗಳೂ ದಿವ್ಯ ನಿರ್ಲಕ್ಷ ತೋರಿದ್ದಾರೆ. ಜೈಲು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಬೆಳಗಾವಿ ಮತ್ತು ಮಹಾರಾಷ್ಟ್ರ ಪೊಲೀಸರು ಕಳವಳವ್ಯಕ್ತಪಡಿಸಿದ್ದು ಇದು ಒಟ್ಟಿನಲ್ಲಿ ಕರ್ನಾಟಕದ ಜೈಲು ವ್ಯವಸ್ಥೆಗೆ ಮುಜುಗರ ತರುವಂತಹ ಸನ್ನಿವೇಶವಾಗಿ ಮಾರ್ಪಟ್ಟಿದೆ


Spread the love

About Laxminews 24x7

Check Also

ಕೈದಿಗಳಿಗೆ ರಾಜಾತಿಥ್ಯ ಸಿಎಂ, ಗೃಹ ಸಚಿವರು ರಾಜೀನಾಮೆ ನೀಡಲಿ: B.J.P.

Spread the love ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ವಿಶೇಷ ಆತಿಥ್ಯ ಖಂಡಿಸಿ ಇಂದು ಸಿಎಂ ಮನೆಗೆ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ