Breaking News

ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರತಂಡದಿಂದ ಸಂಕ್ರಾಂತಿಗೆ ಡಿಫರೆಂಟ್ ವಿಷ್!

Spread the love

ಬೆಂಗಳೂರು: ಯಾವಾಗಲೂ ತನ್ನ ವೈಶಿಷ್ಟ್ಯದೊಂದಿಗೇ ಗಮನ ಸೆಳೆಯುವ ನಟ-ನಿರ್ದೇಶಕ ಉಪೇಂದ್ರ, ಇದೀಗ ತಮ್ಮ ನಿರ್ದೇಶನದ ಹೊಸ ಸಿನಿಮಾ ‘ಯುಐ’ ತಂಡದಿಂದ ಸಂಕ್ರಾಂತಿ ಶುಭಾಶಯ ಕೋರುವುದರಲ್ಲೂ ಡಿಫರೆಂಟ್ ಎನಿಸಿಕೊಂಡಿದ್ದಾರೆ.

ರಿಯಲ್​ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾದ ಟೈಟಲ್​ಗಳೇ ಡಿಫರೆಂಟ್ ಆಗಿರುತ್ತವೆ.

ಅದೇ ರೀತಿ ಅವರು ನಿರ್ದೇಶನ ಮಾಡುತ್ತಿರುವ ನೂತನ ಸಿನಿಮಾ ಹೆಸರೇ ‘ನಾಮ’ದ ರೂಪದಲ್ಲಿದ್ದು ಘೋಷಣೆ ಆದಾಗಲೇ ಭಾರಿ ಗಮನ ಸೆಳೆಯಲಾಗಿತ್ತು. ದೇವರ ನಾಮದ ರೂಪದಲ್ಲಿ ವಿನ್ಯಾಸ ಮಾಡಲಾಗಿರುವ ಈ ಚಿತ್ರದ ಶೀರ್ಷಿಕೆಯನ್ನು ‘ಯುಐ’ ಎಂದು ರಿಜಿಸ್ಟರ್​ ಮಾಡಿಕೊಂಡಿದ್ದರೂ ಅದನ್ನು ನಾನಾ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಈಗ ಇದೇ ಚಿತ್ರತಂಡದ ಮೂಲಕ ಮಕರ ಸಂಕ್ರಮಣದ ಶುಭಾಶಯವನ್ನು ಕೋರಲಾಗಿದ್ದು, ಆ ಕುರಿತ ವಿಶಿಷ್ಟವಾದ ಪೋಸ್ಟರನ್ನು ಉಪೇಂದ್ರ ಸೇರಿದಂತೆ ಚಿತ್ರತಂಡದವರು ಹಂಚಿಕೊಂಡಿದ್ದಾರೆ. ‘ಯುಐ’ ಎಂದಿರುವ ಈ ಚಿತ್ರದ ಟೈಟಲನ್ನು ‘ಯು’ ಅಕ್ಷರದೊಳಗೆ ‘ಐ’ ಅಕ್ಷರ ಬರುವಂತೆಯೂ ವಿನ್ಯಾಸ ಮಾಡಲಾಗಿದೆ. ಅದನ್ನೇ ಮಕರ ಸಂಕ್ರಾಂತಿಗೆ ಶುಭ ಹಾರೈಸುವಾಗ ಎಳ್ಳುಬೆಲ್ಲದಿಂದಲೇ ಯು ರಚಿಸಿ, ಕಬ್ಬಿನ ತುಂಡೊಂದನ್ನು ಐ ರೀತಿ ಇರಿಸಿ ವಿಶಿಷ್ಟವಾಗಿ ಶುಭ ಕೋರಲಾಗಿದೆ. ಹೀಗೆ ಸಂಕ್ರಾಂತಿಯ ಶುಭ ಕೋರುವಲ್ಲಿಯೂ ಕ್ರಿಯೇಟಿವಿಟಿಯನ್ನು ತೋರಿರುವುದು ಸೋಷಿಯಲ್ ಮೀಡಿಯಾದಲ್ಲಿ ಈಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ