ದೋಟಿಹಾಳ: ಕಳೆದ ವರ್ಷ ಜಾತ್ರೆಗಳು ಆರಂಭಕ್ಕೆ ಒಂದು ತಿಂಗಳ ಇರುವಾಗ ಜೆಜೆಎಂ ಕಾಮಗಾರಿಯ ಕುಡಿಯುವ ನೀರಿ ಪೈಪ್ಲೆöÊನ್ ಹಾಕಲು ಗ್ರಾಮದ ಬಹುತ್ತೇಕ ರಸ್ತೆಗಳು ಸಿಸಿ ರಸ್ತೆಯನ್ನು ಅಗೆದು ಪೈಪುಗಳನ್ನು ಹಾಕದೆ ವರ್ಷವಾದರೂ ಆಗೆ ಬಿಟ್ಟಿದ್ದಾರೆ.
ಇದರಿಂದ ರಸ್ತೆಯಲ್ಲಿ ಬೈಕ್ ಸವಾರರು ಮತ್ತು ಸಾರ್ವಜನಿಕರು ಎಡವಿ ಬಿದ್ದಿರುವ ಘಟನೆ ನಡೆದಿದ್ದರೂ ಇದನ್ನು ಸರಿಪಡಿಸಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಮೂಕಪೆಕ್ಷಕರಾಗಿದ್ದಾರೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.
ಗ್ರಾಮದಲ್ಲಿ ಕಳೆದ ಒಂದು ವರ್ಷದ ಹಿಂದೇ ಜಲಜೀವನ್ ಕುಡಿಯುವ ನೀರಿನ ಯೋಜನೆಯಲ್ಲಿ ಗ್ರಾಮದ ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ ಗ್ರಾಮದಲ್ಲಿ ಹೊಸ ಪೈಪ್ಲೈನ್ ಹಾಕಲು ಸಿಸಿ ರಸ್ತೆಗಳನ್ನು ಅಗೆದು ವರ್ಷವಾದರೂ ಪೈಪುಗಳನ್ನು ಹಾಕದೇ ಅಗೆದರು. ಪೈಪುಗಳನ್ನು ಹಾಕದೆ ರಸ್ತೆಯನ್ನು ಆಗೆ ಬಿಟ್ಟಿರುವುದರಿಂದ ಸಾರ್ವಜನಿಕರ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಈ ರಸ್ತೆಯಲ್ಲಿ 100ಕ್ಕೂ ಹೆಚ್ಚು ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಸುಮಾರು 8-10 ಜನರಿಗೆ ಗಂಭೀರವಾದ ಗಾಯವಾಗಿದೆ. ಇಷ್ಟಾದರೂ ಇದನ್ನು ಸರಿಪಡಿಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಮೂಕಪೇಕ್ಷಕರಾಗಿದ್ದಾರೆ.
ಸದ್ಯ ಗ್ರಾಮದಲ್ಲಿ ಒಂದು ತಿಂಗಳಿನಲ್ಲಿ ಎರಡು ಜಾತ್ರೆಗಳು ಬರುತ್ತಿವೆ. ಇನ್ನಾದರೂ ರಸ್ತೆಯನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಕಳೆದ ವರ್ಷ ಜಾತ್ರೆಗೆ ಬಂದ ಸಾವಿರಾರೂ ಭಕ್ತರು ಇಲ್ಲಿಯ ಜನಪ್ರತಿನಿಧಿಗಳಿಗೆ ಮತ್ತು ಮುಖಂಡರಿಗೆ ಚೀಮಾರಿ ಹಾಕಿದಂತೆ ಈ ವರ್ಷವೂ ಚೀಮಾರಿ ಹಾಕುವುದು ಗ್ಯಾರಂಟಿ. ಹೀಗಾಗಿ ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾತ್ರೆಗಳು ಆರಂಭಕ್ಕಿಂತ ಮುಂಚಿತವಾಗಿ ಗ್ರಾಮದ ರಸ್ತೆಗಳನ್ನು ಸರಿಪಡಿಸಿ ಗ್ರಾಮದ ಹೆಸರು ಉಳಿಸಿ ಎಂಬುವುದು ಪ್ರಜ್ಞಾವಂತ ನಾಗರಿಕರ ಕಳಕಳಿಯಾಗಿದೆ